ಮೈಸೂರು ದಸರಾ: ಸಾಂಸ್ಕೃತಿಕ ನಗರಿಗೆ ಹೆಚ್ಚುವರಿ ಬಸ್‌ ಬಿಟ್ಟ ಕೆಎಸ್‌ಆರ್‌ಟಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ವಿಶ್ವವಿಖ್ಯಾತ ದಸರಾ ಹಬ್ಬ ಪ್ರಾರಂಭಕ್ಕೆ ಇನ್ನೆರೆಡು ದಿನ ಬಾಕಿಯಿದೆ. ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಿಂದಲೂ ಪ್ರವಾಸಿಗರ ದಂಡು ಆಗಮಿಸುವ ಹಿನ್ನೆಲೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.

ಈ ಕುರಿತು ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶ್ರೀನಿವಾಸ್..ʻಶಕ್ತಿಯೋಜನೆ ಜಾರಿಯಾದಾಗಿನಿಂದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದು, ಇನ್ನೂ ದಸರಾ ಹಬ್ಬ ಇರುವುದರಿಂದ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯಿದೆ. ಅಲ್ಲದೆ ರಾಜ್ಯದ ನಾನಾ ಭಾಗಗಳು, ಹೊರ ರಾಜ್ಯಗಳಿಂದಲೂ ಜನರ ಬರುವ ನಿರೀಕ್ಷೆಯಿರುವುದರಿಂದ ಹೆಚ್ಚುವರಿಯಾಗಿ 350ಬಸ್‌ಗಳನ್ನು ಬಿಡಲು ತೀರ್ಮಾನಿಸಲಾಗಿದೆʼ ಎಂದರು.

ಈಗಾಗಲೇ ಮೈಸೂರಿಗೆ ಒಂದು ಸಾವಿರ ಬಸ್‌ಗಳನ್ನು ಓಡಿಸುತ್ತಿದ್ದು, ಹೆಚ್ಚುವರಿಯಾಗಿ 350ಬಸ್‌ಗಳನ್ನು ಈ ತಿಂಗಳ ಅಂತ್ಯದವರೆಗೂ ಓಡಿಸಲಾಗವುದು. ಪರಿಸ್ಥಿತಿ ನೋಡಿಕೊಂಡು ಅವಶ್ಯಕತೆಯಿದ್ದಲ್ಲಿ ಬೇರೆ ಡಿಪೋಗಳಿಂದ ಮತ್ತಷ್ಟು ಬಸ್‌ಗಳ ಬಿಡುಗಡೆಗೆ ಚಿಂತಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!