ಮಾನವ- ವನ್ಯಜೀವಿ ಸಂಘರ್ಷ: ಕೇರಳದಲ್ಲಿ ಸಾವಿನ ಸಂಖ್ಯೆ ಗಣನೀಯ ಇಳಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಮೂರು ವರ್ಷಗಳಲ್ಲಿ ಮಾನವ – ವನ್ಯಜೀವಿ ಸಂಘರ್ಷದ ಪ್ರಕರಣಗಳು ಸತತವಾಗಿ ಇಳಿಕೆ ಕಾಣುತ್ತಿದೆ ಎಂದು ಕೇರಳ ಅರಣ್ಯ ಇಲಾಖೆ ಹೇಳಿದೆ.

ಕಳೆದ 2021-22ನೇ ಸಾಲಿಗೆ ಹೋಲಿಸಿದರೆ, 2022-23ರಲ್ಲಿ ಕೇರಳ ರಾಜ್ಯದಲ್ಲಿ ಆನೆ ದಾಳಿಗೆ ಬಲಿಯಾದ ನಾಗರಿಕರ ಸಂಖ್ಯೆ ಕಡಿಮೆ ಇದೆ. 2022-23ರಲ್ಲಿ ಆನೆ ದಾಳಿಗೆ 27 ಮಂದಿ ಬಲಿಯಾಗಿದ್ದರೆ, 2023-24ರಲ್ಲಿ ಈ ಸಂಖ್ಯೆ 17 ಕ್ಕೆ ಇಳಿದಿದೆ. ಇದಕ್ಕೂ ಮುನ್ನ 2021-22ರಲ್ಲಿ ಒಟ್ಟು 35 ಮಂದಿ ಸಾವಿಗೀಡಾಗಿದ್ದರು ಎಂದು ಇಲಾಖಾ ಅಂಕಿ ಅಂಶಗಳು ಮಾಹಿತಿ ನೀಡುತ್ತಿವೆ.

ಇತರೆ ರಾಜಗಳಿಗೆ ಹೋಲಿಸಿದರೆ ಕೇರಳದಲ್ಲಿ ವನ್ಯ ಜೀವಿಗಳಿಗೆ ಬಲಿಯಾದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಕಳೆದ ಐದು ವರ್ಷಗಳ ಅಂಕಿಅಂಶ ಗಮನಿಸುವುದಾದರೆ, ಜಾರ್ಖಂಡ್ ರಾಜ್ಯದಲ್ಲಿ ಆನೆ ದಾಳಿಗೆ ವರ್ಷಕ್ಕೆ ಸರಾಸರಿ 100 ಮಂದಿ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ 148 ಮಂದಿ, ಒಡಿಶಾ 499, ಅಸ್ಸಾಂ 385 ಹಾಗೂ ಪಶ್ಚಿಮ ಬಂಗಾಳದಲ್ಲಿ 358 ಮಂದಿ ಸಾವಿಗೀಡಾಗಿದ್ದಾರೆ. ಎಂದು ಇಲಾಖೆ ತಿಳಿಸಿದೆ.

ವಯನಾಡ್ ಘಟನೆಗೆ ಸಂಬಂಧಿಸಿ ಪ್ರತಿಭಟನೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ಅಂಕಿಅಂಶಗಳನ್ನು ಇಲಾಖೆ ಬಿಡುಗಡೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!