ನೀರಿನಲ್ಲಿ ತೇಲುತ್ತಾ ಕಪ್ಪೆಗಳ ಕಿತ್ತಾಟ: ಫನ್ನಿ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವೀಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಕಪ್ಪೆಗಳ ಕಿತ್ತಾಟದ ವಿಡಿಯೋ ಟ್ವಿಟರ್‌ನಲ್ಲಿ 13 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಟ್ರೆಂಡಿಂಗ್ ಆಗಿದೆ. ಈ ಟ್ರೆಂಡಿಂಗ್ ವೀಡಿಯೊದಲ್ಲಿ, ಕಪ್ಪೆಯೊಂದು ನೀರಿನಲ್ಲಿ ಬಾಟಲಿಯ ಕ್ಯಾಪ್ ಮೇಲೆ ತೇಲುತ್ತಾ ಕುಳಿತಿದೆ. ಇನ್ನೊಂದು ಕಪ್ಪೆ ಮುಚ್ಚಳದ ಮೇಲೆ ಏರಲು ಪ್ರಯತ್ನಿಸುತ್ತದೆ. ಆದರೆ ಮೇಲಿರುವ ಕಪ್ಪೆ ಅದನ್ನು ತಡೆಯುತ್ತಿದೆ. ನೀರಿನಲ್ಲಿರುವ ಕಪ್ಪೆ ಮುಚ್ಚಳದ ಮೇಲೆ ಏರುತ್ತಿದ್ದಂತೆ, ಇನ್ನೊಂದು ಕಪ್ಪೆ ಅದನ್ನು ತನ್ನ ಒದ್ದು ಕೆಳಕ್ಕೆ ಬೀಳಿಸುತ್ತಿದೆ. 11 ಸೆಕೆಂಡ್‌ನ ಈ ವಿಡಿಯೋ ಸದ್ಯ ನೆಟ್ಟಿಗರನ್ನು ಅಪಾರವಾಗಿ ಆಕರ್ಷಿಸಿದೆ. ಒಮ್ಮೆ ನೀವೂ ನೋಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!