ಇನ್ಮುಂದೆ ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲೂ ದುಡ್ಡು ಕೊಟ್ರೆ ಸಿಗತ್ತೆ ಬ್ಲ್ಯೂಟಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಬ್ಲ್ಯೂಟಿಕ್ ಪಡೆಯಲು ಪ್ರತಿ ತಿಂಗಳು ಹಣ ಪಾವತಿಸುವ ನಿಯಮ ಹೊರಡಿಸಿದ್ದಾರೆ. ಮೊದಲು ಇದಕ್ಕೆ ಸಾಕಷ್ಟು ಮಂದಿ ವಿರೋಧಿಸಿದ್ದರೂ ಬ್ಲ್ಯೂಟಿಕ್‌ಗಾಗಿ ಹಣ ಪಾವತಿ ಮಾಡುತ್ತಿದ್ದಾರೆ. ಇದೀಗ ಇದೇ ಫೀಚರ್‌ನ್ನು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿಯೂ ತರಲು ಎಲಾನ್ ಚಿಂತಿಸಿದ್ದು, ಇನ್ಮುಂದೆ ತಮ್ಮ ಬ್ಲ್ಯೂಟಿಕ್ ಖಾಯಂಮಾಡಿಕೊಳ್ಳಲು ಸೆಲೆಬ್ರಿಟಿಗಳು ಹಣ ಪಾವತಿಸಬೇಕಿದೆ.

ಭಾರತದಲ್ಲಿ ಆಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರು ತಿಂಗಳಿಗೆ ಇಂತಿಷ್ಟು ಹಣ ಎಂದು ಪಾವತಿಸಿ ತಮ್ಮ ಅಕೌಂಟ್‌ನ್ನು ವೇರಿಫೈ ಮಾಡಿಸಿಕೊಳ್ಳಬಹುದು. ಆಂಡ್ರಾಯ್ಟ್ ಫೋನ್ ಬಳಕೆದಾರರಿಗೆ ತಿಂಗಳಿಗೆ 599 ರೂಪಾಯಿ ಹಾಗೂ ಐಫೋನ್ ಬಳಕೆದಾರರಿಗೆ 699ರೂಪಾಯಿ ಶುಲ್ಕ ವಿಧಿಸಲಾಗಿದೆ.

ಬ್ಲ್ಯೂಟಿಕ್ ಪಡೆಯಲು ಖಾತೆ ಹೊಂದಿದವರಿಗೆ ಕನಿಷ್ಠ 18 ವರ್ಷ ಆಗಿರಬೇಕು, ಈ ಬಗ್ಗೆ ನಿಮ್ಮ ಫೋಟೊ ಐಡಿ ನೀಡಬೇಕು, ಜೊತೆಗೆ ನನ್ನ ವಯಸ್ಸು ಇಷ್ಟು ಎನ್ನುವ ಸೆಲ್ಫಿ ವಿಡಿಯೋ ಕೂಡ ಕಳುಹಿಸಬೇಕಿದೆ. ಇದರ ನಂತರವಷ್ಟೇ ಬ್ಲ್ಯೂಟಿಕ್ ಸಿಗಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!