June 16, 2026
Tuesday, June 16, 2026
spot_img

ಇನ್ಮುಂದೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಶಾಪ್‌ನಲ್ಲಿ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರ ಹೊಸ ರೂಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಡಿಕಲ್ ಶಾಪ್‌ಗಳಲ್ಲಿ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿಸುವ ದಿನಗಳು ಮುಗಿದಿವೆ. ಕೇಂದ್ರ ಆರೋಗ್ಯ ಇಲಾಖೆಯು ಇನ್ಮುಂದೆ ಯಾವುದೇ ಸಿರಪ್ ಖರೀದಿಸಲು ವೈದ್ಯರ ಅಧಿಕೃತ ಶಿಫಾರಸು ಪತ್ರ ಕಡ್ಡಾಯಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಸಾಮಾನ್ಯ ಕೆಮ್ಮಿನ ಸಿರಪ್‌ಗಳಿಗೂ ಈ ನಿಯಮ ಅನ್ವಯಿಸಲಿದೆ.

ಔಷಧ ಕಾಯ್ದೆಗೆ ಮಹತ್ವದ ತಿದ್ದುಪಡಿ

ಕೇಂದ್ರ ಸರ್ಕಾರವು 1945ರ ಔಷಧ ನಿಯಮಗಳಿಗೆ ಪ್ರಮುಖ ತಿದ್ದುಪಡಿ ತಂದಿದೆ. ಇದರ ಅಡಿಯಲ್ಲಿ, ವಿನಾಯಿತಿ ಪಡೆದ ಔಷಧಿಗಳ ಪಟ್ಟಿಯಲ್ಲಿದ್ದ ‘ಸಿರಪ್‌ಗಳು’ ಎಂಬ ಪದವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಮೂಲಕ ಸಿರಪ್ ಆಧಾರಿತ ಔಷಧಿಗಳ ಮೇಲೆ ಸರ್ಕಾರ ಕಠಿಣ ನಿಗಾ ಇರಿಸಲು ಮುಂದಾಗಿದೆ.

ಓವರ್-ದಿ-ಕೌಂಟರ್ (OTC) ಮಾರಾಟಕ್ಕೆ ನಿಷೇಧ

ಈ ಹೊಸ ತಿದ್ದುಪಡಿಯಿಂದಾಗಿ, ಯಾವುದೇ ಮೆಡಿಕಲ್ ಸ್ಟೋರ್‌ಗಳಲ್ಲಿ ಗ್ರಾಹಕರು ನೇರವಾಗಿ ಹೋಗಿ ಕೆಮ್ಮು ಅಥವಾ ಇತರೆ ಸಿರಪ್‌ಗಳನ್ನು ಕೇಳಿ ಪಡೆಯುವಂತಿಲ್ಲ (Over-the-Counter Sale). ಸಿರಪ್‌ಗಳ ದುರುಪಯೋಗ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಬಿಗಿ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸುವ ಫಾರ್ಮಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !