Thursday, March 23, 2023

Latest Posts

ಇನ್ಮುಂದೆ ಹಾಟ್‌ಸ್ಟಾರ್‌ ನಲ್ಲಿ ಸಿಗೊಲ್ಲ ಎಚ್‌ಬಿಒ ಕಂಟೆಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ವೆಬ್‌ ಸೀರೀಸ್‌ ʼಗೇಮ್‌ ಆಫ್‌ ಥ್ರೋನ್ಸ್‌ʼ ಅಭಿಮಾನಿಗಳಿಗೆ ಈಗ ಕೆಟ್ಟ ಸುದ್ದಿಯೊಂದು ಎದುರಾಗಿದೆ. ಇನ್ಮುಂದೆ ಈ ಶೋ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ನಿಂದ ಮರೆಯಾಗಲಿದೆ. ಹೌದು, ಒಟಿಟಿ ಪ್ಲಾಟ್‌ ಫಾರ್ಮ್‌ ʼಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ʼ (Disney+Hotstar) ಬಗ್ಗೆ ನಿಮಗೆಲ್ಲ ಗೊತ್ತಿದೆ. ಸ್ಟಾರ್‌ ನೆಟ್ವರ್ಕ್‌ ಹಾಗು ಡಿಸ್ನಿಕಂಪನಿಯ ಅಡಿಯಲ್ಲಿನ ಎಲ್ಲಾ ಚಾನೆಲ್ಗಳ ಒಟಿಟಿ ಸೇವೆಗಳೂ ಇದರಲ್ಲಿ ಲಭ್ಯವಾಗುತ್ತಿತ್ತು. ಡಿಸ್ನಿ, ಸ್ಟಾರ್‌, ಮಾರ್ವೆಲ್‌ ಸ್ಟುಡಿಯೋ, ಪಿಕ್ಸಾರ್‌ ಎನಿಮೇಷನ್‌ ಸ್ಟುಡಿಯೋಗಳ ವಿವಿಧ ಕಂಟೆಂಟ್‌ ಗಳು ಈ ಪ್ಲಾಟ್‌ ಫಾರ್ಮ್‌ ನಲ್ಲಿ ದೊರೆಯುತ್ತಿತ್ತು. ಜೊತೆಗೆ ಎಚ್‌ಬಿಒ (HBO) ಸ್ಟುಡಿಯೋದ ಕಂಟೆಂಟ್‌ ಗಳೂ ಪ್ರಸಾರವಾಗುತ್ತಿದ್ದವು.

ಆದರೆ ಇನ್ಮುಂದೆ ತನ್ನ ಪ್ರಸಾರ ಸೇವೆಯಲ್ಲಿ ಎಚ್‌ಬಿಒ (HBO) ಕಂಟೆಂಟ್‌ಗಳನ್ನು ತೆಗೆದುಹಾಕಲು ಡಿಸ್ನಿಪ್ಲಸ್‌ ಹಾಟ್‌ ಸ್ಟಾರ್ ಮುಂದಾಗಿದ್ದು ಮಾರ್ಚ್ 31 ರಿಂದ ಎಲ್ಲಾ HBO ಕಂಟೆಂಟ್‌ ಗಳನ್ನು ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲಿದೆ. ಈ ಕುರಿತು ಡಿಸ್ನಿ ಸಿಇಒ ಬಾಬ್ ಇಗರ್‌ ಘೋಷಣೆ ಮಾಡಿದ್ದು ಕಂಪನಿಯ ವೆಚ್ಚ ಕಡಿತದ ಕ್ರಮಗಳ ಭಾಗವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಹಾಟ್‌ಸ್ಟಾರ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ.

ಇತ್ತೀಚೆಗಷ್ಟೇ ಆಂತರಿಕ ಮರುಹೊಂದಾಣಿಕೆಗಳನ್ನು ಕಂಪನಿ ನಡೆಸಿದ್ದು ಬರೋಬ್ಬರಿ 7 ಸಾವಿರ ಉದ್ಯೋಗ ಕಡಿತಗಳನ್ನು ನಡೆಸಿದೆ. ಕಂಪನಿಯ ವ್ಯವಹಾರವನ್ನು ಹೆಚ್ಚು ಲಾಭದಾಯಕವಾಗಿಸಲು ಚಿಂತನೆ ನಡೆದಿದ್ದು ವೆಚ್ಚ ಕಡಿತದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಭಾಗವಾಗಿ ಈ ಸೇವೆ ಸ್ಥಗಿತಗೊಳ್ಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!