ಇಂದಿನಿಂದ ಜನರ ಕೈಗೆ ಸಿಗಲಿದೆ ‘ಭಾರತ್ ಬ್ರ್ಯಾಂಡ್’ ಅಕ್ಕಿ, ಕೆಜಿಗೆ 29 ರೂಪಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಕೇಂದ್ರದ ಭಾರತ್ ಬ್ರ್ಯಾಂಡ್ ಅಕ್ಕಿ ಜನರ ಕೈಗೆ ಸಿಗಲಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎಲ್ಲ ಪಕ್ಷಗಳು ಹೊಸ ಹೊಸ ರೀತಿಯಲ್ಲಿ ತಂತ್ರಗಳನ್ನು ರೂಪಿಸುತ್ತಿದೆ.

ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ವಾಹನಗಳಿಗೆ ಇಂದು ಚಾಲನೆ ದೊರೆಯಲಿದ್ದು, ಕೆಜಿಗೆ 29 ರೂಪಾಯಿ ಅಕ್ಕಿ ಇಂದು ಜನರ ಕೈಸೇರಲಿದೆ. ಆನ್‌ಲೈನ್‌ನಲ್ಲಿಯೂ ಅಕ್ಕಿ ಖರೀದಿ ಮಾಡಬಹುದಾಗಿದೆ.

ಭಾರತ್ ಅಕ್ಕಿ ಯೋಜನೆಯಡಿ ಮಾರಾಟ ಮಾಡಲಾಗುತ್ತಿದ್ದು, ಐದು ಕೆಜಿ ಹಾಗೂ ಹತ್ತು ಕೆಜಿ ಬ್ಯಾಗ್‌ಗಳಲ್ಲಿ ಅಕ್ಕಿ ಪ್ಯಾಕಿಂಗ್ ಮಾಡಲಾಗಿದೆ. ಇಂದು ಸಂಜೆಯಿಂದ ಬೆಂಗಳೂರಿನಲ್ಲಿ ಅಕ್ಕಿ ಲಭ್ಯವಾಗಲಿದ್ದು, ಕೆಲವೇ ದಿನಗಳಲ್ಲಿ ಇಡೀ ಕರ್ನಾಟಕದಲ್ಲಿ ಅಕ್ಕಿ ಲಭ್ಯವಾಗಲಿದೆ.

ರಿಲಯನ್ಸ್, ಫ್ಲಿಪ್‌ಕಾರ್ಟ್, ಬಿಗ್‌ಬಾಸ್ಕೆಟ್ ಹಾಗೂ ಇನ್ನಿತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಕ್ಕಿ ಖರೀದಿ ಮಾಡಬಹುದಾಗಿದೆ. ದಿನಸಿ ಅಂಗಡಿಗಳಲ್ಲಿಯೂ ಕೆಲವೇ ದಿನದಲ್ಲಿ ಅಕ್ಕಿ ಲಭ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!