ಇಂದಿನಿಂದ ಓಲಾ, ಊಬರ್, ರ‍್ಯಾಪಿಡೋ ಕಂಪನಿಗಳ ಆಪ್ ಆಟೋ ಸೇವೆ ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಓಲಾ,ಊಬರ್, ರ‍್ಯಾಪಿಡೋ ಕಂಪನಿಗಳ ಆಪ್‌ಗಳಲ್ಲಿ ಆಟೋ ಸೇವೆ ಬ್ಯಾನ್ ಮಾಡಲಾಗಿದ್ದು, ನಿಯಮ ಪಾಲನೆ ಮಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ನಿಯಮದ ಪ್ರಕಾರ ಆಟೋ ಸೇವೆ ಒದಗಿಸಲು ಕಂಪನಿಗಳಿಗೆ ಅನುಮತಿ ಇಲ್ಲ. ಸಂಸ್ಥೆಗಳಿಗೆ ಆಟೋ ಸೇವೆಯನ್ನು ಆಪ್‌ನಿಂದ ತೆಗೆಯಲು ಸೂಚನೆ ನೀಡಲಾಗಿದೆ. ಆದರೂ ಪಾಲಿಸದಿದ್ದರೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದ್ದಾರೆ.

ಪರವಾನಗಿ ಪಡೆಯದ ಆಟೋಗಳು ಚಲಾಯಿಸಿದ್ದರೆ ಐದು ಸಾವಿರ ರೂ. ದಂಡ ಹಾಕಲಾಗುವುದು. ಪರವಾನಗಿ ಪಡೆದ ಆಟೋಗಳಷ್ಟೇ ಚಾಲನೆ ಮಾಡಬಹುದು, ಅದರಲ್ಲಿಯೂ ಸಾರಿಗೆ ಇಲಾಖೆ ನಿಗದಿಪಡಿಸಿದ ದರದಲ್ಲೇ ಆಟೋ ಓಡಿಸಬೇಕು.

ಇಡೀ ಆಪ್ ರದ್ದುಗೊಳಿಸಲು ಸಾಧ್ಯವಿಲ್ಲ. ಒಂದೂವರೆ ವರ್ಷದಿಂದ ಕಂಪನಿಗಳ ಪರವಾನಗಿ ನವೀಕರಣಗೊಂಡಿಲ್ಲ. ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಆಪ್ ರದ್ದು ಕಷ್ಟ ಎಂದು ಕಂಪನಿ ಹೇಳಿದೆ. ಓಲಾ, ಊಬರ್ ಆಟೋ ಓಡಿಸಿದರೆ ಸಾರ್ವಜನಿಕರು ನೇರವಾಗಿ ಸಾರಿಗೆ ಇಲಾಖೆಗೆ ಕರೆ ಮಾಡಿ ದೂರು ನೀಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!