ಹೊಸದಿಗಂತ ವರದಿ ಮಂಗಳೂರು:
ಪಿ. ಲಕ್ಷ್ಮೀನಾರಾಯಣ ರಾವ್ ಅವರ ಸಾರಥ್ಯ ದಲ್ಲಿ 14 ನೇ ವರ್ಷದ ಬೃಹತ್ ತಿರುಪತಿ ಪಾದಯಾತ್ರೆಯು ಆಗಸ್ಟ್ 10 ರಿಂದ ಆರಂಭಗೊಂಡು 18 ದಿನ ಈ ಪಾದಯಾತ್ರೆಯು ಮುಕ್ತಾಯವಾಗಲಿದೆ.
ಮೊದಲ ದಿನ ಸಾಸ್ತಾನದಿಂದ ಹಿರಿಯಡಕ ವೀರಭದ್ರ ದೇವಸ್ಥಾನ ದಲ್ಲಿ ಉಳಿದು, ಹಾಗೆ ಅಲ್ಲಿಂದ ಒಂದೊಂದು ದಿನ ಹೊಸ್ಮಾರು ಲಕ್ಷ್ಮೀ ವೆಂಕಟರಮಣ ಭಜನಾ ಮಂದಿರ, ಧರ್ಮಸ್ಥಳ ಗಂಗೋತ್ರಿ ಹಾಲ್, ಗುಂಡ್ಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಸಕಲೇಶಪುರ ಓಂ ಮಂದಿರ ಹಾಲ್, ಹಾಸನ ಬನಶಂಕರಿ ಕಲ್ಯಾಣ ಮಂಟಪ,ಚೆನ್ನರಾಯಪಟ್ಟಣ ಗಣಪತಿ ಪೆಂಡಾಲ್, ಬೆಳ್ಳೂರು ಕ್ರಾಸ್,ಕುಣಿಗಲ್ ಲಕ್ಷ್ಮೀರಂಗನಾಥ ಹಾಲ್,ಹುಲಿಕುಂಟೆ, ನಂದಿಗ್ರಾಮ ಸಮುದಾಯ ಭವನ,ಕೈವಾರ, ರಾಯಲ್ ಪಾಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಕೊನೆಯ ದಿನ, ಶ್ರೀನಿವಾಸ ಮಂಗಾಪುರ ದಿಂದ ತಿರುಮಲ ತಲುಪಿ ದೇವರ ದರುಶನ ಪಡೆಯಲಾಗುವುದು.
ಈ ಪಾದಯಾತ್ರೆ ಯಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ಪಾದಯಾತ್ರೆ ಮಾಡುವರು,ತಿರುಪತಿ ತಲುಪುವ ತನಕ ಸಂಪೂರ್ಣ ಜವಾಬ್ದಾರಿ ವೆಂಕಟೇಶ್ವರ ಸ್ವೀಟ್ಸ್ ನವರದ್ದೇ ಆಗಿರುತ್ತದೆ. ಬೆಳಗ್ಗಿನ ಉಪಹಾರ, ಮದ್ಯಾಹ್ನ ಭೋಜನ, ಹಾಗೂ ಸಂಜೆ ಉಪಹಾರ, ರಾತ್ರಿ ಊಟ ಕುಡಿಯುವ ನೀರಿನ ವ್ಯವಸ್ಥೆ,ಎಲ್ಲವನ್ನು ವೆಂಕಟೇಶ್ವರ ಸ್ವೀಟ್ಸ್ ನವರೇ ಮಾಡುವರು.
ಪಾದಯಾತ್ರೆ ಹೋಗುವ ದಾರಿಯಲ್ಲಿ ಪಾದಯಾತ್ರಿಗಳು ಏನಾದರೂ ಶ್ರಮ ಸೇವೆ ಮಾಡುತ್ತಾ ಹೋಗುತ್ತಾರೆ,ಸೇವ್ ಬ್ಲಡ್ ರಕ್ತಧಾನದ ಬಗ್ಗೆ ಅರಿವು, ಪ್ರಾಣಿ ಪಕ್ಷಿ ಗಳಿಗೆ ಆಹಾರ ನೀಡುವುದು, ಭಿಕ್ಷುಕರಿಗೆ ಆಹಾರ ನೀಡುವುದು, ಬಸ್ ಸ್ಟಾಂಡ್ ಸ್ವಚ್ಛತೆ ಮಾಡುವುದು, ವಯಸ್ಸಾದವರಿಗೆ ಏನಾದ್ರು ಕೆಲಸದ ಸಹಾಯ ಮಾಡುತ್ತಾ ಹೋಗುತ್ತಾರೆ.