ನಾಳೆಯಿಂದ ಡಿಜಿಟಲ್ ರೂ. ಪ್ರಾಯೋಗಿಕ ಬಳಕೆ: ಎಷ್ಟು ಬ್ಯಾಂಕ್‌ಗಳು ನೀಡಲಿವೆ ಸಾಥ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಲ್ಲರೆ ವಹಿವಾಟುಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಗೆ ಡಿಸೆಂಬರ್ ೧ರಂದು ಚಾಲನೆ ನೀಡಲಾಗುವುದು ಎಂದು ಆರ್‌ಬಿಐ ಮಂಗಳವಾರ ಹೇಳಿದೆ.
ಆರಂಭಿಕ ಹಂತದಲ್ಲಿ ಎಸ್‌ಬಿಐ, ಐಸಿಐಸಿಐ ಸೇರಿದಂತೆ ನಾಲ್ಕು ಬ್ಯಾಂಕ್‌ಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳಲಿವೆ.ಆರ್‌ಬಿಐ, ಡಿಜಿಟಲ್ ರೂಪಾಯಿಯ ಬಳಕೆಯನ್ನು ಸಗಟು ವಹಿವಾಟುಗಳಿಗೆ ಪ್ರಾಯೋಗಿಕವಾಗಿ ನವೆಂಬರ್ 1 ರಂದು ಚಾಲನೆ ನೀಡಿದೆ.

ಈಗ ಆಯ್ದ ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ಮಾತ್ರ ಚಿಲ್ಲರೆ ವಹಿವಾಟುಗಳಿಗೆ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಬಳಕೆಗೆ ಚಾಲನೆ ನೀಡಲಾಗುತ್ತದೆ. ನಾಲ್ಕು ನಗರಗಳಲ್ಲಿ ಇದು ಆರಂಭವಾಗಲಿದೆ. ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಇದು ಕಾನೂನುಬದ್ಧ ಕರೆನ್ಸಿಯಾಗಿರುತ್ತದೆ ಎಂದು ಆರ್‌ಬಿಐ ಹೇಳಿದೆ. ಡಿಜಿಟಲ್ ರೂಪಾಯಿಯನ್ನು ಬ್ಯಾಂಕ್ ಶಾಖೆಗಳ ಮೂಲಕ ವಿತರಿಸಲಾಗುತ್ತದೆ. ಬ್ಯಾಂಕ್‌ಗಳು ನೀಡುವ ಡಿಜಿಟಲ್ ವಾಲೆಟ್‌ಗಳ ಮೂಲಕ ಇದನ್ನು ವಹಿವಾಟಿಗೆ ಬಳಸಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!