ಹತ್ತು ರೂಪಾಯಿ ಇದ್ರೂ ಎಂಟು ರೂಪಾಯಿ ಐಸ್‌ಕ್ರೀಂ ಮಾತ್ರ ತಿಂದ ಪುಟಾಣಿ!

ಪುಟಾಣಿಯೊಬ್ಬ ಐಸ್‌ಕ್ರೀಂ ತಿನ್ನೋದಕ್ಕೆ ಹೋಗ್ತಾನೆ. ಮನೆಯಲ್ಲಿ ಅವನ ಕೈಗೆ ಹತ್ತು ರೂಪಾಯಿ ಕೊಟ್ಟಿದ್ದಾರೆ. ಐಸ್ ಕ್ರೀಂ ತಿನ್ನಲು ಸೀದಾ ಪಾರ್ಲರ್‌ಗೆ ಬಾಲಕಿ ಬಂದುಬಿಟ್ಟಿದ್ದ.

ಹತ್ತು ರೂಪಾಯಿಗೆ ಯಾವ ಐಸ್ ಕ್ರೀಂ ಸಿಗುತ್ತದೆ ಎಂದು ಕೇಳಿದ? ಅಷ್ಟು ಕಮ್ಮಿಗೆ ಐಸ್‌ಕ್ರೀಂ ಸಿಗೋದೆ ಹೆಚ್ಚು ಅಲ್ವಾ? ಕ್ಯಾಂಡಿ ಒಂದು ಸಿಗಬಹುದು ಎಂದು ವೇಟರ್ ಹೇಳಿದ್ರು. ಐದು ರೂಪಾಯಿ ಅಥವಾ ಎಂಟು ರೂಪಾಯಿಗೆ ಏನಾದ್ರೂ ಸಿಗತ್ತಾ ಕೇಳಿದ. ಎಂಟು ರೂಪಾಯಿಗೆ ಒಂದು ಸಣ್ಣ ಕ್ಯಾಂಡಿ ಸಿಗತ್ತೆ, ಅದಕ್ಕೂ ಕಮ್ಮಿಗೆ ಏನೂ ಇಲ್ಲ ಎಂದು ಮುಖ ಸಿಂಡರಿಸಿಕೊಂಡು ಹೇಳಿದ ವೇಟರ್.

ಮಗು ಹೇಳಿತು ಸರಿ, ಎಂಟು ರೂಪಾಯಿ ಕ್ಯಾಂಡಿ ಕೊಡಿ. ಹತ್ತು ರೂಪಾಯಿ ಇದ್ರೂ ಎಂಟು ರೂಪಾಯಿ ಕ್ಯಾಂಡಿ ಕೇಳ್ತಾನಲ್ಲ ಎಂದು ವೇಟರ್ ತಲೆ ಕೆಡಿಸಿಕೊಂಡು ಐಸ್ ಕ್ಯಾಂಡಿ ತಂದು ಕೊಟ್ಟು ಹೋದ. ನಂತರ ಬಿಲ್ ಕೊಟ್ಟರು. ಪುಟಾಣಿ ಹತ್ತು ರೂಪಾಯಿ ಕೊಟ್ಟ. ಉಳಿದ ಎರಡು ರೂಪಾಯಿ ಚಿಲ್ಲರೆಯನ್ನು ವೇಟರ್‌ಗೆ ಟಿಪ್ಸ್ ಎಂದು ನೀಡಿ ಹೋಗಿದ್ದ ಪುಟಾಣಿ!

ಲಕ್ಷಗಟ್ಟಲೆ ದುಡಿಯಬಹುದು, ಆದರೆ ಮಾನವೀಯತೆ ಇಲ್ಲದೆ ಹೋದರೆ? ಯಾರನ್ನೂ ದುಡ್ಡಿನಿಂದ ಅಳೆಯಬೇಡಿ, ಮನಸ್ಸಿಂದ ಶ್ರೀಮಂತರು ಸಿಗುವುದೇ ಕಷ್ಟ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!