ಉಕ್ರೇನ್ ನಿಂದ ಭಾರತಕ್ಕೆ ಬಂತು 6ನೇ ವಿಮಾನ: 240 ಜನರು ಸ್ವದೇಶಕ್ಕೆ ವಾಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್ ರಷ್ಯಾ ನಡುವಿನ ಯುದ್ಧ ಕದನದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು, ಇಂದು ಏರ್ ಇಂಡಿಯಾದ 6ನೇ ವಿಮಾನವು ಉಕ್ರೇನ್ ನಿಂದ 7 ಕನ್ನಡಿಗರು ಸಹಿತ 240 ಭಾರತೀಯರನ್ನು ಹೊತ್ತು ಸ್ವದೇಶಕ್ಕೆ ಆಗಮಿಸಿದೆ.
ಈಗಾಗಲೇ ಐದು ವಿಮಾನಗಳಲ್ಲಿ ಭಾರತೀಯರನ್ನು ಉಕ್ರೇನ್ ನಿಂದ ವಾಪಾಸ್ ಸ್ವದೇಶಕ್ಕೆ ಕರೆತರಲಾಗಿತ್ತು. ಇದೀಗ ೬ನೇ ವಿಮಾನವು ಭಾರತಕ್ಕೆ ಬಂದಿಳಿದಿದೆ.
ಇದುವರೆಗೆ 1,406 ಭಾರತೀಯರನ್ನು ಉಕ್ರೇನ್ ನಿಂದ ವಾಪಾಸ್ ಕರೆತರಲಾಗಿದೆ. ಇವರಲ್ಲಿ 44 ಕನ್ನಡಿಗರು ಸೇರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!