ಉಕ್ರೇನ್‌ನಿಂದ ಸ್ಥಳಾಂತರಗೊಳ್ಳುವ ಭಾರತೀಯರಿಗೆ ಆರೋಗ್ಯ ಸಚಿವಾಲಯ ನೀಡಿದೆ ವಿವಿಧ ವಿನಾಯಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಡ್ಡಾಯ ಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಮಾನವೀಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿಯಲ್ಲಿ ನಾನಾ ವಿನಾಯಿತಿಗಳನ್ನು ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಗೃಹ ವ್ಯವಹಾರಗಳ ಸಚಿವಾಲಯದ ನಿಕಟ ಸಹಯೋಗದೊಂದಿಗೆ ತನ್ನ ಎಲ್ಲ ಬೆಂಬಲವನ್ನು ನೀಡುತ್ತಿದೆ.

ದೊಡ್ಡ ಸಂಖ್ಯೆಯ ವಲಸಿಗರು ಹಾಗೂ ಭಾರತೀಯ ಪ್ರಜೆಗಳು (ಮುಖ್ಯವಾಗಿ ವಿದ್ಯಾರ್ಥಿಗಳು) ಉಕ್ರೇನ್ ದೇಶವು ಎದುರಿಸುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ‘ಏರ್‌ಮೆನ್‌ಗಳಿಗೆ ನೋಟಿಸ್’ ಅಥವಾ ‘ಏರ್‌ಮಿಷನ್‌ಗಳಿಗೆ ನೋಟಿಸ್’ (ಎನ್‌ಒಟಿಎಎಂ) ಹೊರಡಿಸಿದ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿಕೊಂಡಿರುವ ಈ ಭಾರತೀಯರನ್ನು ವಿಮಾನಗಳ ಮೂಲಕ ನೇರವಾಗಿ ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪೋಲೆಂಡ್, ರೊಮೇನಿಯಾ, ಸ್ಲೊವಾಕಿಯಾ ಮತ್ತು ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳನ್ನು ಉಕ್ರೇನ್‌ನಿಂದ ಕರೆತರಲು ಮತ್ತು ಆಪರೇಶನ್ ಗಂಗಾ ವಿಮಾನಗಳ ಅಡಿಯಲ್ಲಿ ತಮ್ಮ ದೇಶಗಳಿಂದ ಅವರನ್ನು ಕಳುಹಿಸುವ ವ್ಯವಸ್ಥೆ ಮಾಡುತ್ತಿವೆ.

ಸೋಮವಾರ ಮಧ್ಯಾಹ್ನದವರೆಗೆ ಉಕ್ರೇನ್‌ನಿಂದ ಭಾರತೀಯರನ್ನು ಹೊತ್ತ 5 ವಿಮಾನಗಳು (ಮುಂಬೈನಲ್ಲಿ ಒಂದು ಮತ್ತು ದಿಲ್ಲಿಯಲ್ಲಿ ನಾಲ್ಕು) ಒಟ್ಟು 1156 ಪ್ರಯಾಣಿಕರೊಂದಿಗೆ ಭಾರತಕ್ಕೆ ಬಂದಿಳಿದಿವೆ. ಇಲ್ಲಿಯವರೆಗೆ ಯಾವುದೇ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗಿಲ್ಲ.

ಆರೋಗ್ಯ ಸಚಿವಾಲಯದ ವಿನಾಯಿತಿಗಳು:

  • ಪ್ರಸ್ತುತ ಅಂತಾರಾಷ್ಟ್ರೀಯ ಆಗಮನಕ್ಕಾಗಿ ಮಾರ್ಗಸೂಚಿಗಳ ಭಾಗವಾಗಿ ನಿಗದಿಪಡಿಸಲಾಗಿರುವ ಕಡ್ಡಾಯ ಆವಶ್ಯಕತೆಗಳಲ್ಲಿ (ಪ್ರಿ-ಬೋರ್ಡಿಂಗ್ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ ಅಥವಾ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಮಾಣಪತ್ರ) ಯಾವುದನ್ನೂ ಪೂರೈಸದ ಭಾರತೀಯ ಪ್ರಜೆಗಳಿಗೆ ಭಾರತಕ್ಕೆ ತೆರಳುವ ಮೊದಲು ‘ಏರ್-ಸುವಿಧಾ’ ಪೋರ್ಟಲ್‌ನಲ್ಲಿ ಈ ದಾಖಲೆಗಳನ್ನು ಅಪ್‌ಲೋಡ್ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ.
  • ತಮ್ಮ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸಿದ ವ್ಯಕ್ತಿಗಳಿಗೆ (ನಿರ್ಗಮನ/ಲಸಿಕೆಯ ದೇಶವನ್ನು ಲೆಕ್ಕಿಸದೆ) ಮುಂದಿನ 14 ದಿನಗಳ ವರೆಗೆ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡುವ ಸಲಹೆಯೊಂದಿಗೆ ಭಾರತಕ್ಕೆ ತಲುಪುವ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅನುಮತಿ ನೀಡಲಾಗಿದೆ.
  • ಒಂದು ವೇಳೆ ಪ್ರಯಾಣಿಕರಿಗೆ ಆಗಮನ ಪೂರ್ವ ಆರ್‌ಟಿಪಿಸಿಆರ್ ಪರೀಕ್ಷಾ ವರದಿಯನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಅಥವಾ ತಮ್ಮ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸದಿದ್ದರೆ, ಭಾರತಕ್ಕೆ ಬಂದ ನಂತರ 14 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳುವ ಸಲಹೆಯೊಂದಿಗೆ, ದೇಶಕ್ಕೆ ಆಗಮಿಸಿದಾಗ ತಮ್ಮ ಮಾದರಿಗಳನ್ನು ಸಲ್ಲಿಸಲು ಅವರಿಗೆ ಅನುಮತಿ ನೀಡಲಾಗಿದೆ. ಅಂಥವರ ವರದಿ ಪಾಸಿಟಿವ್ ಎಂದು ಬಂದರೆ, ಅಂತಹ ಪ್ರಕರಣಗಳನ್ನು ನಿಗದಿಪಡಿಸಿದ ಪ್ರೊಟೋಕಾಲ್ ಪ್ರಕಾರ ಅವರ ಮೇಲೆ ನಿಗಾ ಇಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!