ಉಕ್ರೇನ್‌ನಿಂದ ಮೈಸೂರಿಗೆ ಬಂದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ ಶಾಸಕ ರಾಮದಾಸ್

ಹೊಸ ದಿಗಂತ ವರದಿ, ಮೈಸೂರು:

ಉಕ್ರೇನ್ ನಿಂದ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿರುವ ತಮ್ಮ ಮನಗೆಗಳಿಗೆ ಸುರಕ್ಷಿತವಾಗಿ ಆಗಮಿಸಿದ ವಿದ್ಯಾರ್ಥಿಗಳ ಮನೆಗೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ಶಾಸಕ ಎಸ್.ಎ.ರಾಮದಾಸ್, ಆ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.
ಉಕ್ರೇನ್ ನಲ್ಲಿ ವೈದ್ಯಕೀಯ ಕೋರ್ಸ್ ಓದುತ್ತಿದ್ದು, ಇದೀಗ ಅಲ್ಲಿಂದ ವಾಪಾಸ್ ಬಂದಿರುವ ಟಿ. ಕೆ.ಲೇಔಟ್ ನ ಮುಕುಂದ್ ಎಂಬ ವಿದ್ಯಾರ್ಥಿ ಮಾತನಾಡಿ, ನಮಗೆ ನಿಜಕ್ಕೂ ಭಾರತ ಸರ್ಕಾರ ಚೆನ್ನಾಗಿ ಸ್ಪಂದಿಸಿ ನಮ್ಮನ್ನು ಮನೆ ತಲುಪುವವರೆಗೂ ಕೂಡಾ ಯೋಗಕ್ಷೇಮ ವಿಚಾರಿಸಿತು. ಆಹಾರ ಜೊತೆಗೆ ಆಶ್ರಯಕ್ಕೆ ಎಲ್ಲೂ ಕೂಡಾ ತೊಂದರೆಯಾಗದAತೆ ನೋಡಿಕೊಂಡಿತು. ಇದಕ್ಕೆ ಭಾರತ ಸರ್ಕಾರಕ್ಕೆ ,ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಶ್ರೀರಾAಪುರ ನಿವಾಸಿ ಪ್ರಿಯಾಂಕ ಗುರುಮಲ್ಲೇಶ್ ಅವರ ಮನೆಗೆ ಭೇಟಿ ನೀಡಿದ ಶಾಸಕರು ಯೋಗಕ್ಷೆ÷್ಮÃಮ ವಿಚಾರಿಸಿದರು. ನಂತರ ಮಾತನಾಡಿ, ಉಕ್ರೇನ್ ನಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದು, ಹಗಲು ರಾತ್ರಿ ಎನ್ನದೇ ಭಾರತ ಸರ್ಕಾರ ಅವರನ್ನು ರಕ್ಷಿಸಲು ಪಣ ತೊಟ್ಟಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಕೆಲವೇ ದಿನಗಳಲ್ಲಿ ಅಲ್ಲಿರುವ ಅಷ್ಟೂ ಜನ ಭಾರತೀಯರು ಸುರಕ್ಷಿತವಾಗಿ ಮರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಭಾರತೀಯರನ್ನೂ ಕೂಡಾ ಸುರಕ್ಷಿತವಾಗಿ ದೇಶಕ್ಕೆ ಕರೆತರುತ್ತೇವೆ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಈ ವೇಳೆ ನಗರಪಾಲಿಕೆ ಸದಸ್ಯೆ ಗೀತಾಶ್ರೀ ಯೋಗಾನಂದ್, ಪ್ರಮುಖರಾದ ಗಿರೀಶ್ ಗೌಡ, ಜಗದೀಶ್, ಶಿವಣ್ಣ, ರಾಜಣ್ಣ, ಮಂಜು, ಮಹೇಶ್, ಮಧು, ರಮೇಶ್, ಬಸವರಾಜ್, ಸತೀಶ್ ಕುಮಾರ್ ಇನ್ನಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!