“ಟಾಲಿವುಡ್‌ ಮಂದಿ ಶಾಂಪೇನ್‌ ಹಿಡಿದು ಡ್ಯಾನ್ಸ್‌ ಮಾಡುವ ಅಗತ್ಯವಿಲ್ಲ”: ರಾಮ್‌ ಗೋಪಾಲ್‌ ವರ್ಮಾ ಈ ರೀತಿ ಹೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಭಾರತದ ಚಿತ್ರಗಳು ಈಗ ಇಡೀ ವಿಶ್ವದ ಚಿತ್ರರಂಗದ ಮೇಲೆ ಪ್ರಭಾವ ಬೀರಿದೆ. ಆದರೆ ಇತ್ತೀಚೆಗೆ ಪ್ರಧಾನಿ ಮೋದಿ ತೆಲುಗು ಚಿತ್ರಗಳನ್ನು ಹೊಗಳಿದ ಮಾತ್ರಕ್ಕೆ ಟಾಲಿವುಡ್‌ ಮಂದಿ ಬ್ರೇಕ್‌ ಡ್ಯಾನ್ಸ್‌ ಮಾಡುವ ಅಗತ್ಯ ಇಲ್ಲ ಎಂದು ನಿರ್ದೇಶದ ರಾಮ್‌ ಗೋಪಾಲ್‌ ವರ್ಮಾ ನೇರವಾಗಿ ಟಾಂಗ್‌ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ಟಾಲಿವುಡ್‌ಗೆ ಶಾಂಪೇನ್‌ನೊಂದಿಗೆ ಬ್ರೇಕ್‌ಡ್ಯಾನ್ಸ್ ಮಾಡುವ ಅಗತ್ಯವಿಲ್ಲ ಏಕೆಂದರೆ ಪ್ರಧಾನಿ ಹೊಗಳಿರುವುದು ಬಾಹುಬಲಿ ಹಾಗೂ ಪುಷ್ಪ ಚಿತ್ರಕ್ಕೆ ಮಾತ್ರ ಬದಲಿಗೆ ವರ್ಷವಿಡೀ ಬಿಡುಗಡೆಯಾಗುವ 150 ಸಿನಿಮಾಗಳ ಬಗ್ಗೆ ಅಲ್ಲ. ರಾಜಮೌಳಿ ಹಾಗೂ ಅಲ್ಲು ಅರ್ಜುನ್‌ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್‌ ವುಡ್‌ ಅನ್ನೇ ಹೊಗಳುತ್ತಿದ್ದರು ಎಂದು ತೆಲುಗು ಸ್ಟಾರ್‌ ನಟ, ನಟಿಯರು ಹಾಗೂ ನಿರ್ದೇಶಕರಿಗೆ ನೇರವಾಗಿ ಟಾಂಗ್‌ ಕೊಟ್ಟಿದ್ದಾರೆ.

ಇನ್ನು ಕಳೆದೆರಡು ವರ್ಷಗಳಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಗಳಾದ ಮಲಯಾಳಂ, ಕನ್ನಡ, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬವದಲಾವಣೆ ಕಂಡಿದ್ದೇವೆ. ಇನ್ನು ಹೆಚ್ಚು ಗುಣಮಟ್ಟದ ಚಿತ್ರಗಳನ್ನು ಕಂಡಿದ್ದೇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!