Thursday, February 2, 2023

Latest Posts

ಸಾಲಬಾಧೆಯಿಂದ ಹತಾಶೆ: ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಂದೆ!

ಹೊಸದಿಗಂತ ವರದಿ,ಬೀದರ್:

ಜಿಲ್ಲೆಯ ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ರೈತ ಸಾಲಬಾಧೆಯಿಂದ ಹತಾಶಗೊಂಡು ತಮ್ಮ ಸ್ವಂತ ಹೊಲದಲ್ಲಿರುವ ಬಾವಿಯಲ್ಲಿ ತನ್ನ ಇಬ್ಬರು 6 ಮತ್ತು 8 ವರ್ಷದ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ರೈತ ವಿಕ್ರಂ ಜಾಲಿಂದರ್ ಬಿರಾದಾರ (36), ತನ್ನ ಮಕ್ಕಳಾದ ಸಂಗಮೇಶ ವಿಕ್ರಂ (6) ಮತ್ತು ಸುದರ್ಶನ ವಿಕ್ರಂ (8) ಅವತೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತ ವಿಕ್ರಂ ಬಿರಾದಾರಗೆ ಲಖನಗಾಂವ ಎಸ್.ಬಿ.ಐ.ನಲ್ಲಿ 50 ಸಾವಿರ ರೂ. ಸೇರಿದಂತೆ ಇತರೆ ಖಾಸಗಿ 8 ಲಕ್ಷ ರೂ. ಸಾಲವಿತ್ತು. ಕಳೆದ ಎರಡು ವರ್ಷಗಳಿಂದ ಸಾಲ ತಿರಿಸಲು ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಸ್ವಂತ ಹೋಲದಲ್ಲಿರುವ ಬಾವಿಗೆ ಹಾರಿ ಮೂವರು ಪ್ರಾಣ ಬಿಟ್ಟಿದ್ದಾರೆ.
ಕುಟುಂಬದವರ ದೂರಿನ ಮೇರೆಗೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!