ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾದಲ್ಲಿ ಇಂಧನ ಕೊರತೆ ಸಮಸ್ಯೆ ಎದುರಾಗಿದ್ದು, ಭಾರತ ಮೂಲದ ಇಂಡಿಯನ್ ಆಯಿಲ್ ಕಾರ್ಪೋರೇಷನ್ನಿಂದ 40,000 ಮೆಟ್ರಿಕ್ ಟನ್ ತೈಲ ಖರೀದಿ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಶ್ರೀಲಂಕಾದ ಇಂಧನ ಸಚಿವ ಗಮಿನಿ ಲೊಕುಗೆ ಮಾಹಿತಿ ನೀಡಿದ್ದು, ಶ್ರೀಲಂಕಾ ಸರ್ಕಾರ ತೈಲ ಖರೀದಿ ಕುರಿತು ಭಾರತ ಸರ್ಕಾರದ ಜೊತೆ ಮಾತುಕತೆ ನಡೆಸಲಿದೆ ಎಂದಿದ್ದಾರೆ.
2002 ರಿಂದ ಭಾರತ ಮೂಲದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆ ಶ್ರೀಲಂಕಾದಲ್ಲಿ ಕಾರ್ಯಾಚರಿಸುತ್ತಿದೆ. ತೈಲ ಖರೀದಿಗೆ ಸಂಸತ್ನಲ್ಲಿ ಒಪ್ಪಿಗೆ ದೊರೆತಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ತಲಾ 40 ಸಆವಿರ ಮೆಟ್ರಿಕ್ ಟನ್ ಪ್ರಮಾಣದಲ್ಲಿ ಖರೀದಿಸಲಿದೆ.