ʼಬೆಂಗಳೂರು ನಡೀತೀರೋದೆ ನಮ್ಮಿಂದʼ ದರ್ಪದ ಮಾತನಾಡಿದ ನಾರ್ಥಿ ಲೇಡಿಗೆ ಫುಲ್‌ ಕ್ಲಾಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ ಹೊರ ರಾಜ್ಯದ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿರುವ ವೀಡಿಯೋ ವೈರಲ್‌ ಆಗಿದ್ದು, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರನ್ನ ಕೆರಳುವಂತೆ ಉತ್ತರ ಭಾರತೀಯ ಮೂಲದ ಯುವತಿಯ ಹೇಳಿಕೆ ನೀಡಿದ್ದಾಳೆ. ನಿನ್ನೆಯಷ್ಟೇ ಓಲಾ ಆಟೋ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ಆಗಿತ್ತು. ಬಳಿಕ ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೂಡ ಮಾಡಲಾಗಿತ್ತು. ಅದರಂತೆ ಚಾಲಕನ ವಿರುದ್ಧ ಪೊಲೀಸರ ಕ್ರಮ ಕೂಡ ಆಗಿತ್ತು.

ಈ ಘಟನೆಯನ್ನ ಖಂಡಿಸುವ ಭರದಲ್ಲಿ ಬೆಂಗಳೂರನ ಸ್ಥಳೀಯರ ವಿರುದ್ಧ ಅವಾಚ್ಯ ಶಬ್ದ ಬಳಸಿ ಯುವತಿ ಮಾತನಾಡಿದ್ದಾಳೆ. ‘ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂಥವರಿಂದಲೇ ಇಡೀ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವೆಲ್ಲಾ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ ಎಂದು ಯುವತಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಕನ್ನಡಿಗರಿಗೆ ಈ ಯುವತಿ ಮಾತು ಸ್ವಲ್ಪವೂ ಇಷ್ಟವಾಗಿಲ್ಲ, ಇಷ್ಟೊಂದು ಧಿಮಾಕಿದ್ದರೆ ನಮ್ಮ ರಾಜ್ಯ ಬಿಟ್ಟು ತೊಲಗು, ನಮಗೂ ನಿಮ್ಮಂಥವರನ್ನು ನೋಡಿ ಸಾಕಾಗಿದೆ ಎಂದು ಕಮೆಂಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!