ಮಕ್ಕಳ ದಿನಾಚರಣೆಯಂದು ಆರ್ಕಿಡ್ಸ್‌ ಶಾಲೆಯಲ್ಲಿ ಗಮನ ಸೆಳೆದ ʼಮೋಜಿನ ಮೇಳʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನವೆಂಬರ್‌ 14ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ʼಮೋಜಿನ ಮೇಳʼ ಹಮ್ಮಿಕೊಳ್ಳಲಾಗಿತ್ತು. ಭಾರತದ ಹತ್ತು ನಗರಗಳಲ್ಲಿ, ಒಟ್ಟು 32 ಆರ್ಕಿಡ್ಸ್‌ ಶಾಖೆಗಳಲ್ಲಿ ಯಶಸ್ವಿಯಾಗಿ ನಡೆದ ಮೋಜಿನ ಮೇಳವು, ಪೋಷಕರಿಗೆ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ವೇದಿಕೆ ಕಲ್ಪಿಸಿತು.
80 ಹಾಗೂ 90 ರ ದಶಕದ ಆಟಗಳನ್ನು ಆಡುವುದರ ಮೂಲಕ ಪೋಷಕರು ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು. ಮ್ಯಾಜಿಕ್‌ಶೋ, ಸಂಗೀತ ಕುರ್ಚಿ, ರಿಂಗ್‌ಟಾಸ್‌, ಸೇರಿದಂತೆ ಪೋಷಕರು ಹಾಗೂ ಮಕ್ಕಳನ್ನು ಮನರಂಜಿಸುವ ಹಲವು ಆಟಗಳು, ಚಟುವಟಿಕೆಗಳು ನಡೆದವು.
ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬೆಂಗಳೂರಲ್ಲಿರುವ ಆರ್ಕಿಡ್ಸ್‌ನ ಯಲಹಂಕ, ನಾಗರಭಾವಿ, ಜಾಳಹಳ್ಳಿ, ಸರ್ಜಾಫುರ, ಸಹಕಾರನಗರ, ಜೆಪಿನಗರ, ಬನ್ನೇರುಘಟ್ಟ ಶಾಖೆಗಳಲ್ಲಿ ಮೋಜಿನ ಮೇಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮ ನಡೆದ 32 ಶಾಖೆಗಳಲ್ಲಿ ಸುಮಾರು 25000ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಭಾಗವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!