ಕ್ರೂರ ಘಟನೆ: ನಾಯಿಯನ್ನು ನೇಣು ಹಾಕಿ ಕೊಂದ ನರರೂಪ ರಾಕ್ಷಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದಲ್ಲಿ ಮೂಕಪ್ರಾಣಿಗಳಿಗೂ ರಕ್ಷಣೆಯಿಲ್ಲ ಎಂಬುದಕ್ಕೆ ಈ ಭಯಾನಕ ಘಟನೆ ಸಾಕ್ಷಿಯಂತಿದೆ. ಮೂವರು ವ್ಯಕ್ತಿಗಳು ನಾಯಿಯನ್ನು ಅತ್ಯಂತ ಕ್ರೂರವಾಗಿ ನೇಣು ಬಿಗಿದು ಸಾಯಿಸಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಗಾಜಿಯಾಬಾದ್‌ನ ಎಲೈಚಿಪುರ್ ಪ್ರದೇಶದಲ್ಲಿ ನಾಯಿಯನ್ನು ಗೋಡೆಗೆ ನೇತುಹಾಕಿ ಕೊಂದರು. ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮೂವರು ವ್ಯಕ್ತಿಗಳು ಕಪ್ಪು ನಾಯಿಯ ಕುತ್ತಿಗೆಗೆ ಸರಪಳಿಯಿಂದ ಕಟ್ಟಿ ಗೋಡೆಯ ಮೇಲೆ ನೇತುಹಾಕಿದ್ದಾರೆ. ಬಳಿಕ ನಾಯಿಯ ಕುತ್ತಿಗೆಗೆ ಮತ್ತೊಂದು ಸರಪಳಿ ಬಿಗಿದು ಎರಡೂ ಕಡೆ ಎಳೆದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.

ದೇಶದ ರಾಜಧಾನಿ ದೆಹಲಿ ಬಳಿ ನಡೆದಿರುವ ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗಾಜಿಯಾಬಾದ್ ಪೊಲೀಸರು, ಈ ವಿಡಿಯೋ ಹಳೆಯದ್ದು, ಮತ್ತು ಅವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!