ದಾಳಿಯಲ್ಲಿ ಸಿಕ್ಕಿದ್ದು ಪಂಚರಾಜ್ಯ ಚುನಾವಣೆಯ ಫಂಡಿಂಗ್: ಕೈಗೆ ಬಿಸಿ ಮುಟ್ಟಿಸಿದ ಬಿಜೆಪಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ಸಂದರ್ಭ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಬರೋಬ್ಬರಿ 42 ಕೋಟಿ ರೂ. ಪಂಚರಾಜ್ಯ ಚುನಾವಣೆಯ ಫಂಡಿಂಗ್ ಎಂದು ಬಿಜೆಪಿ ಚಾಟಿ ಬೀಸಿದೆ.

ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಕರ್ನಾಟಕ ಬಿಜೆಪಿ, ಕರ್ನಾಟಕವನ್ನು ಸಂಪೂರ್ಣ ಅಂಧಕಾರದಲ್ಲಿರಿಸಿರುವ ಕಾಂಗ್ರೆಸ್, ರಾಜ್ಯದ ಜನತೆಯ ಶ್ರಮದ ತೆರಿಗೆ ಹಣವನ್ನು, 80% ಕಮಿಷನ್ ರೂಪದಲ್ಲಿ ವಸೂಲಿ ಮಾಡಿ, ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಅಸಲಿ ಕರ್ನಾಟಕ ಮಾಡೆಲ್ ಎಂದು ತಿವಿದಿದೆ.

ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ ಎನ್ನುವುದಕ್ಕೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ದೊರೆತ 42 ಕೋಟಿ ಹಣವೇ ಪ್ರಮುಖ ಸಾಕ್ಷಿ. ರಾಜ್ಯವನ್ನು ಹಾಡುಹಗಲೇ ಈ ಪರಿ ಲೂಟಿ ಮಾಡುತ್ತಿರುವ ಈ ನಾಡದ್ರೋಹಿಗಳು, ಕರ್ನಾಟಕವನ್ನು ದಿವಾಳಿಯತ್ತ ಕೊಂಡೊಯ್ಯುವುದು ಗ್ಯಾರಂಟಿ! ಎಂದು ಲೇವಡಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!