ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಡಕಟ್ಟು ಸಮುದಾಯಕ್ಕೆ ಸೇರಿರುವ ಮಹಿಳೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವ ಮೂಲಕ ಮತ್ತೊಂದು ಹೊಸ ಇತಿಹಾಸ ಸೃಷ್ಟಿಯಾಗಿದೆ.
ಕೇಂದ್ರ ಸರ್ಕಾರ ಮದ್ರಾಸ್ ಹಾಗೂ ಮಣಿಪುರ ಹೈಕೋರ್ಟ್ ಗಳಿಗೆ ಮೂವರು ನ್ಯಾಯಮೂರ್ತಿಗಳನ್ನು ಶುಕ್ರವಾರ ನೇಮಕ ಮಾಡಿದ್ದು, ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯ ಮಣಿಪುರ ಹೈಕೋರ್ಟ್‌ಗೆ ಇದೇ ಮೊದಲ ಬಾರಿಗೆ ನೇಮಕಗೊಳ್ಳುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದು ದಮನಕ್ಕೆ ಒಳಗಾದ ವರ್ಗಗಳಿಗೆ ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ವೈವಿಧ್ಯತೆಯನ್ನು ತರುವ ಪಯತ್ನವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಈ ನ್ಯಾಯಮೂರ್ತಿಗಳ ನೇಮಕವನ್ನು ಟ್ವಿಟರ್‌ನಲ್ಲಿ ಹಂಚಿಕೊಮಡಿದ್ದಾರೆ. ಸದ್ಯದಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲಿದ್ದಾರೆ. ಮಣಿಪುರ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ನ್ಯಾಯಾಂಗ ಅಧಿಕಾರಿ ಗೊಲ್ಮೆಯ್ ಗೈಫುಲ್‌ಶಿಲ್ಲು ಕಬುಯಿ ಅವರನ್ನು ನೇಮಕ ಮಾಡುವ ಅಧಿಸೂಚನೆಯು ಜನವರಿ 10 ರಿಂದ ಬಾಕಿ ಉಳಿದಿದೆ.