ಮೇಷ
ಕೆಲವರ ವರ್ತನೆ ಕುರಿತು ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಅಂತಹ ಮನೋಭಾವನೆ ಬಿಟ್ಟರೆ ಒಳಿತು.
ವೃಷಭ
ನಕಾರಾತ್ಮಕ ಚಿಂತನೆ ಬಿಡಿ. ಪಾಸಿಟಿವ್ ಆಗಿ ಯೋಚಿಸಿ. ಅಸಾಧ್ಯದ ಕೆಲಸವೂ ನಿಮ್ಮಿಂದ ಸಾಧ್ಯವಾಗಲಿದೆ. ಕುಟುಂಬದಲ್ಲಿ ಭಿನ್ನಮತ ನಿವಾರಿಸಿಕೊಳ್ಳಿ.
ಮಿಥುನ
ಇತರರ ಕೆಲಸ ಟೀಕಿಸಲು ಹೋಗದಿರಿ. ನೀವು ಅವರಿಂದಲೇ ಟೀಕೆ ಕೇಳಬೇಕಾದೀತು. ಭವಿಷ್ಯದ ಕುರಿತಂತೆ ಚಿಂತೆ ಕಾಡಬಹುದು. ಆರ್ಥಿಕ ಒತ್ತಡ.
ಕಟಕ
ಕುಟುಂಬದಲ್ಲಿ ಸಂಬಂಧ ಸುಧಾರಣೆ. ಮನಸ್ತಾಪ ನಿವಾರಣೆ. ಆಹಾರದಲ್ಲಿ ಹಿತಮಿತ ಸಾಧಿಸಿ.ಇಲ್ಲವಾದಲ್ಲಿ ಹೊಟ್ಟೆ ಕೆಡುವ ಪ್ರಸಂಗ ಉದ್ಭವಿಸೀತು.
ಸಿಂಹ
ವ್ಯವಹಾರ, ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ನೆರೆಯವರ ಜತೆ ಕಲಹ ಬೇಡ. ಅದರಿಂದ ಮನಶ್ಯಾಂತಿ ಹಾಳು.
ಕನ್ಯಾ
ಮನೆಯಲ್ಲಿ ಸೌಹಾರ್ದ ವಾತಾವರಣ.ಇದರಿಂದ ನಿಮಗೆ ಹೆಚ್ಚಿನ ಹುರುಪು. ದುಬಾರಿ ವಸ್ತು ಖರೀದಿಸುವ ಮುನ್ನ ಸರಿಯಾಗಿ ಪರಾಮರ್ಶಿಸಿ.
ತುಲಾ
ನಿಮ್ಮ ಕುರಿತಂತೆ ವಿರೋಧಿಗಳ ಅಪಪ್ರಚಾರ ನಡೆದೀತು. ಅದನ್ನು ಕಡೆಗಣಿಸಿ. ಸಮಾನಮನಸ್ಕರ ಬೆಂಬಲ ಪಡೆಯಲು ಪ್ರಯತ್ನಿಸಿ.
ವೃಶ್ಚಿಕ
ಆತ್ಮೀಯರ ಜತೆ ಭಿನ್ನಾಭಿಪ್ರಾಯ. ಸಣ್ಣ ವಿಷಯಕ್ಕೆ ರೇಗದಿರಿ. ಶಾಂತಚಿತ್ತರಾಗಿ ಪ್ರತಿಕ್ರಿಯಿಸಿ. ಬಿಗುಮಾನ ಬಿಟ್ಟು ವ್ಯವಹರಿಸಬೇಕು. ಅಧಿಕ ವ್ಯಯ.
ಧನು
ಪ್ರಮುಖ ಕಾರ್ಯ ಫಲ ನೀಡುವ ದಿನ. ಈ ದಿನ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯಲ್ಲಿ ಉದಾಸೀನತೆ ಬಿಟ್ಟು ಕಾರ್ಯವೆಸಗಿ.ಕೌಟುಂಬಿಕ ಶಾಂತಿ.
ಮಕರ
ಎಲ್ಲರನ್ನು ಮೆಚ್ಚಿಸುವ ಪ್ರಯತ್ನ ಫಲ ನೀಡದು. ಅಂತಹ ಪ್ರಯತ್ನ ಮಾಡಬೇಡಿ. ನಿಮ್ಮನ್ನು ಟೀಕಿಸುವವರನ್ನು ಕಡೆಗಣಿಸುವುದೇ ಒಳಿತು.
ಕುಂಭ
ನಿಮಗೆ ಹಿತವೆನಿಸದ ಬೆಳವಣಿಗೆ ಸಂಭವಿಸಬಹುದು. ಆದರೆ ಅದನ್ನು ಸರಿಪಡಿಸುವ ವಿಧಾನ ನಿಮಗೆ ತಿಳಿದಿದೆ. ಹಿಂಜರಿಕೆ ಬೇಡ.
ಮೀನ
ನಿಮ್ಮ ಸುತ್ತಲಿನವರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ಬಿಡಿ. ಇತರರ ಮರುಳು ಮಾತಿಗೆ ಮರುಳಾಗಬೇಡಿ. ದೃಢ ನಿಲುವಿರಲಿ.