Monday, March 4, 2024

ದಿನಭವಿಷ್ಯ: ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಬೇಡ, ಲಾಭದ ನಿರೀಕ್ಷೆ

 

ಮೇಷ
ನೀವು ಮಾಡುವ ಎಲ್ಲಾ ಕಾರ್ಯ ಹಿತ ತರಲಾರದು. ಕೆಲವು ಪ್ರತಿಕೂಲ ಪರಿಣಾಮ ಉಂಟಾದೀತು. ಇತರರ ಪ್ರಲೋಭನೆಗೆ ಒಳಗಾಗಬೇಡಿ.

ವೃಷಭ
ಇತರರಿಗೆ ನೆರವು ನೀಡುವ ಮೂಲಕ ತೃಪ್ತಿ, ಸಂತೋಷ ಪಡೆಯುವಿರಿ. ಕೌಟುಂಬಿಕ ಸಹಕಾರ. ವೃತ್ತಿಯಲ್ಲಿ ನಿಮಗೆ ಅನುಕೂಲ ಸನ್ನಿವೇಶ.

ಮಿಥುನ
ನಿಮ್ಮ ಗುರಿ ಸಾಧಿಸಲು ಏಕಾಗ್ರತೆಯ ಕೊರತೆ ಕಾಡುವುದು. ಯಾವುದೋ ವಿಷಯ ಮನಸ್ಸು ಕೊರೆಯುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದಿರಿ.

ಕಟಕ
ಕಾರ್ಯಶೈಲಿಯಲ್ಲಿ ಸ್ವಲ್ಪ ಬದಲಾವಣೆ ತರಬೇಕು. ಇಲ್ಲವಾದರೆ ನಿಮಗೆ ಸಮಸ್ಯೆ ಉಂಟಾದೀತು. ಇತರರ ಸಲಹೆಗಳಿಗೆ ಕಿವಿಗೊಡಿ. ಹಠಮಾರಿ ಧೋರಣೆ ಬೇಡ.

ಸಿಂಹ
ಯಾವುದೇ ಗಂಭೀರ ಕಾರ್ಯಕ್ಕೆ ಎಳಸದೆ ನಿರಾಳವಾಗಿರಲು ಇಂದು ಬಯಸುವಿರಿ. ದೈನಂದಿನ ಜಂಜಾಟದಿಂದ ದೂರ ಉಳಿಯಿರಿ.

ಕನ್ಯಾ
ಕೆಲಸದಲ್ಲಿ ಅವಸರ ಮಾಡಬೇಡಿ. ಅದರಿಂದ ನೀವು ಬಯಸಿದ ಫಲ ಸಿಗಲಾರದು. ಸಾವಧಾನವಾಗಿ ಯೋಚಿಸಿ ಕಾರ್ಯ ಎಸಗಿರಿ.

ತುಲಾ
ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಬೇಕುಬೇಡಗಳನ್ನು ಆಲಿಸಿರಿ. ವೃತ್ತಿಯಲ್ಲಿ ಕೆಲವು ಹಿನ್ನಡೆ ಕಾಣುವಿರಿ. ಸಮಸ್ಯೆ ಉಂಟಾದೀತು.

ವೃಶ್ಚಿಕ
ಗೊಂದಲ, ಹತಾಶೆ ಕಾಡುವುದು. ನಿಮ್ಮ ಕೌಟುಂಬಿಕ ಮತ್ತು ವೃತ್ತಿಯ ಒತ್ತಡ ಇದಕ್ಕೆ ಕಾರಣ. ಮಾನಸಿಕ ದೃಢತೆ ಕಾಯ್ದುಕೊಳ್ಳಿ. ದಿಟ್ಟ ನಿರ್ಧಾರ ತಾಳಿ.

ಧನು
ನಿಮ್ಮ ವರ್ತನೆಯಲ್ಲಿ ಇಂದು ಗುಣಾತ್ಮಕ ಬದಲಾವಣೆ ಕಂಡುಬಂದೀತು. ಎಲ್ಲವನ್ನೂ ಪ್ರಾಕ್ಟಿಕಲ್ ಆಗಿ ಯೋಚಿಸಿ. ಅತಿ ಭಾವಕತೆ ಬಿಟ್ಟುಬಿಡಿ.

ಮಕರ
ಸಮಸ್ಯೆ ಕಾಡಿದರೂ ಅದಕ್ಕೆ ಸೂಕ್ತ ಪರಿಹಾರ ಕೂಡ ಕಂಡುಕೊಳ್ಳುವಿರಿ. ನಿಮ್ಮ ಹಿಂದಿನ ಅನುಭವ ನೆರವಿಗೆ ಬರಲಿದೆ. ಆರ್ಥಿಕ ಒತ್ತಡ ನಿವಾರಣೆ.

ಕುಂಭ
ಇತರರ ನೆರವು ಬಯಸುವುದಾದರೆ ಕೇಳಲು ಹಿಂಜರಿಕೆ ಬೇಡ. ಅದರಿಂದ ನಿಮಗೆ ಒಳಿತೇ ಆಗಲಿದೆ. ಕೌಟುಂಬಿಕ ಭಿನ್ನಮತ ಶಮನ ಕಾಣುವುದು.

ಮೀನ
ಭಾವನಾತ್ಮಕ ದಿನ. ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಯಬೇಕಿಲ್ಲ. ಸಂಬಂಧವನ್ನು ಗಟ್ಟಿಗೊಳಿಸಿರಿ. ಆರ್ಥಿಕ ಒತ್ತಡ ನಿವಾರಣೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!