Monday, March 4, 2024

ಆಯೋಧ್ಯೆಯಲ್ಲಿ ರಾಮಲಲಾ ಬೆಳ್ಳಿ ಮೂರ್ತಿಯ ಮೆರವಣಿಗೆ: ದರುಶನ ಪಡೆದ ಭಕ್ತರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಗೆ ಕ್ಷಣಗಣನೆ ಬಾಕಿ ಉಳಿದಿದ್ದು, ಈಗಾಗಲೇ ಪೂಜೆಗಳು ಆರಂಭಗೊಂಡಿದೆ.
ಇಂದು ಬೆಳ್ಳಿಯ ರಾಮಲಲಾ ಮೂರ್ತಿಯ ಮೆರವಣಿಗೆ ಮಾಡಲಾಗಿದೆ.ಆಯೋಧ್ಯೆ ರಾಮ ಮಂದಿರ ಆವರಣದಲ್ಲಿ ಮೂರ್ತಿ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದರ್ಶನ ಪಡೆದಿದ್ದಾರೆ.

ಹೂವುಗಳಿಂದ ಅಲಂಕಾರಗೊಂಡ ರಾಮಲಲಾ ಬೆಳ್ಳಿ ಮೂರ್ತಿಯನ್ನು ಮೆರವಣಿ ಮಾಡಲಾಗಿದೆ. ಅರ್ಚಕರು ಮೂರ್ತಿ ಎತ್ತಿಕೊಂಡು ಮೆರವಣಿ ಮಾಡಿದ್ದಾರೆ. ಇದೇ ವೇಳೆ ಕಲಷದ ಮೂಲಕ ಪೂರ್ಣಕುಂಭ ಸ್ವಾಗತ ಮಾಡಲಾಗಿದೆ.

ಮೂರ್ತಿ ಮೆರವಣಿ ವೇಳೆ ಭಕ್ತರು ಕಾಣಿಕೆ ಸಲ್ಲಿಸಿ ಶ್ರೀರಾಮ ಆಶೀರ್ವಾದ ಪಡೆದಿದ್ದಾರೆ. ಆಯೋಧ್ಯೆ ಆವರಣದಲ್ಲಿ ಈ ಮೆರವಣಿ ನಡೆಸಲಾಗಿದೆ.

ಜನವರಿ 16ರಂದು ರಾಮ ಮಂದಿರದಲ್ಲಿ ಪ್ರಾಯಶ್ಚಿತ್ತ. ಕರ್ಮ ಕುಟಿ ಪೂಜೆಗಳನ್ನು ಮಾಡಲಾಗಿದೆ. ದೇಗುಲದ ಪೂಜಾ ವಿಧಿಗಳನ್ನು ಗಣೇಶ ಶಾಸ್ತ್ರಿಗಳ ಉಸ್ತುವಾರಿಯಲ್ಲಿ 21 ಆಚಾರ್ಯರು ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ವಿಘ್ನ ವಿನಾಶಕ ಗಣೇಶನಿಗೆ ಪೂಜೆ ಸಲ್ಲಿಸಿ ಬಳಿಕ ರಾಮಲಲಾ ವಿಗ್ರಹದ ಪರಿಸರ ಪ್ರವೇಶ ನಡೆಸಲಾಗಿತ್ತು.ಬಳಿಕ ತೀರ್ಥ ಪೂಜೆ ನೆರವೇರಿಸಲಾಗಿದೆ. ಇದಾದ ಬಳಿಕ ರಾಮ ಲಲಾ ಮೆರವಣಿಗೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!