ದಿನಭವಿಷ್ಯ: ಅನುಭವಿಗಳ ಮುಂದೆ ಮೌನವಾಗಿರುವುದು ಲೇಸು, ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ

ಮೇಷ
ಕೌಟುಂಬಿಕ  ವಿಚಾರದಲ್ಲಿ ಭಾವನಾತ್ಮಕ ಏರುಪೇರು. ಸಣ್ಣ ವಿಷಯ ಭಾವೋದ್ವೇಗ ಸೃಷ್ಟಿಸೀತು. ವಾಗ್ವಾದಕ್ಕೆ ಅವಕಾಶ ಕಲ್ಪಿಸಬೇಡಿ.

ವೃಷಭ
ಸಣ್ಣ ವಿಷಯ ವಿರಸಕ್ಕೆ ಕಾರಣವಾಗದಂತೆ ಎಚ್ಚರ ವಹಿಸಿ. ಎಲ್ಲರ ಜತೆ ಸೌಹಾರ್ದಯುತ ನಡವಳಿಕೆ ಅಗತ್ಯ. ಖರ್ಚು ಹೆಚ್ಚಬಹುದು.

ಮಿಥುನ
ಖರ್ಚು ಕಡಿಮೆ ಮಾಡಿ. ಖರೀದಿಯ ಉತ್ಸಾಹ ನಿಯಂತ್ರಿಸಿ.  ಆತ್ಮೀಯರ ಜತೆಗಿನ ಮನಸ್ತಾಪ ಅಂತ್ಯ. ಮಾನಸಿಕ ನಿರಾಳತೆ.

ಕಟಕ
ಯಶಸ್ವಿ ದಿನ.  ಆರ್ಥಿಕ ಪರಿಸ್ಥಿತಿ ಉತ್ತಮ. ಸಂಬಂಧದಲ್ಲಿ ಸೌಹಾರ್ದತೆ ಕಾಪಾಡಲು ಗಮನ ಕೊಡಿ. ವಾಗ್ವಾದಕ್ಕೆ ಇಳಿಯದಿರಿ.

ಸಿಂಹ
ಮುಗಿಸಲೇ ಬೇಕಾದ ಕೆಲಸವನ್ನು ಮುಂದಕ್ಕೆ ಹಾಕದಿರಿ. ಅದು ಮುಂದಕ್ಕೆ ಸಮಸ್ಯೆ ಸೃಷ್ಟಿಸೀತು. ಕುಟುಂಬದ ಸಹಕಾರ ಸಿಗುವುದು.

ಕನ್ಯಾ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಸನ್ನಿವೇಶ. ಸಂಬಂಧದಲ್ಲಿ ಮೂಡಿದ್ದ ಅಪಸ್ವರ ನಿವಾರಣೆ.  ಬಾಂಧವ್ಯದಲ್ಲಿ ಹೊಂದಾಣಿಕೆ ಒಳಿತು.

ತುಲಾ
ಒಬ್ಬರ ಕುರಿತಾದ ತಪ್ಪಭಿಪ್ರಾಯ ನಿವಾರಣೆ ಆಗುವುದು. ಹಿರಿಯರ ಜತೆ ವಾಗ್ವಾದಕ್ಕೆ ಇಳಿಯದಿರಿ.  ಬಂಧುಗಳ ಸಹಕಾರ.

ವೃಶ್ಚಿಕ
ವೃತ್ತಿಯಲ್ಲಿ ಅಪೇಕ್ಷಿಸಿದ ಫಲ. ಕೌಟುಂಬಿಕ ಉದ್ವಿಗ್ನತೆ ಯಿಂದ ಮಾನಸಿಕ ಅಶಾಂತಿ. ಹಿರಿಯರಿಗೆ ಅನಾರೋಗ್ಯಚಿಂತೆ.

ಧನು
ನಿಮ್ಮ ಪಾಲಿಗಿಂದು ಸುಗಮ ದಿನ. ವ್ಯವಹಾರ ಸಲೀಸು. ಆಪ್ತ ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ವ್ಯಯ ಕಡಿಮೆ. ಕೌಟುಂಬಿಕ ನೆಮ್ಮದಿ.

ಮಕರ
ನಗುತ್ತಲೇ ಎಲ್ಲರ ಜತೆ ವ್ಯವಹರಿಸಿ. ಎಲ್ಲ ಕಾರ್ಯ ಸುಲಲಿತವಾಗಿ ನಡೆಯುವುದನ್ನು ಕಾಣುವಿರಿ. ಆರ್ಥಿಕ ಬಿಕ್ಕಟ್ಟು ನಿವಾರಣೆ.

ಕುಂಭ
ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಪ್ರತಿಫಲ ಪಡೆಯಲಾರಿರಿ. ನಿರಾಶೆ. ಇತರರ ಮಾತಿಗೆ ಒಳಗಾಗಿ  ಸಿಲುಕಿ ಸಮ್ಮತವಲ್ಲದ ಕೆಲಸ ಮಾಡಬೇಡಿ.

ಮೀನ
ನಿಮ್ಮ ಇಚ್ಛೆ ಈಡೇರುವ ದಿನ.  ನೀವು ತೆಗೆದುಕೊಳ್ಳುವ ಪ್ರತಿಯೊಂದು ನಡೆ ಈ ನಿಟ್ಟಿನಲ್ಲಿ ಮುಖ್ಯ ಹೆಜ್ಜೆಯಾಗಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!