ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರವರಾತ್ರಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವ ನೋಡುಗರ ಮೈ ರೋಮಾಂಚನಗೊಳಿಸಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾರಸಂಘಚಾಲಕ್ ಡಾ. ಮೋಹನ್‌ಜಿ ಭಾಗವತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಕಳೆ ಹೆಚ್ಚಿಸಿದರು.
ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ, ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಹಿಸಿದ್ದರು.
ಉದ್ಯಮಿಗಳಾದ ಅಜಿತ್ ಕುಮಾರ್ ಎಸ್.ಜೈನ್, ಬಿ.ನಾರಾಯಣ, ಮನೋಜ್ ಕುಮಾರ್ , ಬೆಳಗಾವಿಯ ಉದ್ಯಮಿ ರಾಧೇಶ್ಯಾಮ್ ಶ್ರೀವಲ್ಲಭ , ಬೆಂಗಳೂರು ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಬಂಜಾರ, ರವಿಕಲ್ಯಾಣ ರೆಡ್ಡಿ, ನವೀನ್ ಗೋಯಲ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಈ ಅದ್ಭುತವಾದ ಕ್ರೀಡೋತ್ಸವ ಕಾರ್ಯಕ್ರಮ ಹೇಗಿತ್ತು ಎಂಬುದರ ಫೋಟೋ ಝಲಕ್ ಇಲ್ಲಿದೆ ನೋಡಿ:
ಚಿತ್ರ: ಅಪುಲ್ ಇರಾ