ದಿನಭವಿಷ್ಯ: ಅನ್ಯರ ಜೊತೆ ಮಾತಿಗೆ ಮಾತು ಬೆಳೆಯಬಹುದು, ಎಚ್ಚರದಿಂದ ಮುನ್ನಡೆಯಿರಿ

ಮೇಷ
ಕೆಲವು ಕಾರ್ಯ ಮುಗಿಸಲೇ ಬೇಕಾದ ಒತ್ತಡ. ವಿರಾಮಕ್ಕೆ ಅವಕಾಶ ಸಿಗದು. ಕೌಟುಂಬಿಕ ಬಿಕ್ಕಟ್ಟು, ಮುನಿಸು ಸಂಭವ.
ವೃಷಭ
ಕೆಲ ವಿಚಾರಗಳಲ್ಲಿ ಮಾತಿನ ಚಕಮಕಿ ಸಂಭವ. ಹಾಗಾಗಿ ನೀವಿಂದು ಹೆಚ್ಚು ತಾಳ್ಮೆ ಪ್ರದರ್ಶಿಸಬೇಕು. ನಿರ್ಧಾರ ತಾಳುವಲ್ಲಿ ದುಡುಕಬೇಡಿ.
ಮಿಥುನ
ನೀವು ಬಯಸಿದ  ಬದಲಾವಣೆ ಉಂಟಾಗಲಿದೆ. ಅದಕ್ಕೆ ಸೂಕ್ತವಾಗಿ ಹೊಂದಿಕೊಳ್ಳಿ. ಮನೆಯವರ ಸಲಹೆಗೆ ಸೂಕ್ತವಾಗಿ ಸ್ಪಂದಿಸಿರಿ.
ಕಟಕ
ಕೆಲವು ಪರಿಸ್ಥಿತಿಗಳು ನಿಮ್ಮ ನಿಯಂತ್ರಣ ಮೀರಿ ಸಾಗಬಹುದು. ಪ್ರತಿ ವಿಷಯದಲ್ಲೂ ಹೆಚ್ಚಿನ ಗಮನ ಅವಶ್ಯ. ತಾಳ್ಮೆ ಕಳಕೊಳ್ಳದಿರಿ.
ಸಿಂಹ
ನಿಮ್ಮ ಪಾಲಿಗೆ ಇಂದು ಎಲ್ಲವೂ ಸುಗಮ ವಾಗಿ ಸಾಗುವುದು. ಕಾರ್ಯ ಸಿದ್ಧಿ. ಪ್ರೀತಿಯಲ್ಲಿ ಸಕಾರಾತ್ಮಕ ಬೆಳವಣಿಗೆ. ಆರೋಗ್ಯ ತೃಪ್ತಿಕರ.
ಕನ್ಯಾ
ನಿಮ್ಮ ಆಕಾಂಕ್ಷೆ ಈಡೇರುವುದು. ವಿವಾಹಾಕಾಂಕ್ಷಿಗಳಿಗೆ ಪೂರಕ ಬೆಳವಣಿಗೆ. ಶೇರು ವ್ಯವಹಾರದಲ್ಲಿ ತೊಡಗಿದವರಿಗೆ ಲಾಭ.
 ತುಲಾ
ವ್ಯವಹಾರದಲ್ಲಿ ಅದೃಷ್ಟ ನಿಮಗಿದೆ. ಆರ್ಥಿಕ ಉನ್ನತಿ. ಕೌಟುಂಬಿಕ ಸಹಕಾರ, ಭಿನ್ನಮತ ನಿವಾರಣೆ. ವೃತ್ತಿ ಸಮಸ್ಯೆ ಪರಿಹಾರ.
ವೃಶ್ಚಿಕ
ಪ್ರೀತಿಯ  ವಿಷಯ ದಲ್ಲಿ ಸಮಸ್ಯೆಗೆ ಪರಿಹಾರ ದೊರಕುವುದು. ಸಕಾರಾತ್ಮಕ ನಡೆನುಡಿ ಅವಶ್ಯ. ವದಂತಿಗೆ ಕಿವಿಗೊಡಬೇಡಿ.
ಧನು
ಸಕಾಲದಲ್ಲಿ ಕಾರ್ಯ ಪೂರೈಸುವುದು. ಎಲ್ಲರೊಡನೆ ಉತ್ತಮ ಬಾಂಧವ್ಯ. ವೃತ್ತಿಯಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ. ನೆಮ್ಮದಿ.
ಮಕರ
ವೃತ್ತಿಯಲ್ಲಿ ನಿಮ್ಮ ನಿರ್ವಹಣೆ ಎಲ್ಲರ ಗಮನ ಸೆಳೆಯುವುದು. ವ್ಯಕ್ತಿಗತ ಸಮಸ್ಯೆಯೊಂದು ಸುಖಾಂತ್ಯ. ಮಾನಸಿಕ ನಿರಾಳತೆ.
ಕುಂಭ
ಅತಿಯಾದ ಕೆಲಸದ ಒತ್ತಡ. ತೃಪ್ತಿಕರ ಬೆಳವಣಿಗೆ ಉಂಟಾಗದು.  ಕೌಟಂಬಿಕವಾಗಿ ಸಂವಹನದ ಕೊರತೆ.ಅಸಂತೃಪ್ತಿ ಕಾಡುವುದು.
ಮೀನ
ಭಾವನಾತ್ಮಕ ಏರುಪೇರು. ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಏಕಾಗ್ರಚಿತ್ತತೆ ಕಷ್ಟ. ಹಣದ ನಷ್ಟವೂ ಸಂಭವಿಸಬಹುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!