K9 ಹೀರೋ ಜ್ಯಾಕ್ ಇನ್ನಿಲ್ಲ: ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಸಾಹಸಿ’ಗೆ ಭಾವನಾತ್ಮಕ ವಿದಾಯ

ಹೊಸ ದಿಗಂತ ವರದಿ, ಮಂಗಳೂರು:

ಕೆಲವು ದಿನಗಳ ಹಿಂದಷ್ಟೇ ತನ್ನ 13ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ‘ಜ್ಯಾಕ್’ ಇಹಲೋಕ ತ್ಯಜಿಸಿದೆ.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸದಸ್ಯನಾಗಿದ್ದ ಈ ಲ್ಯಾಬ್ರಡಾರ್ ತಳಿಯ ಶ್ವಾನ ವಯೋಸಹಜ ಅಸ್ವಸ್ಥತೆಯಿಂದ ವಿಧಿವಶವಾಗಿದೆ.

ನಿಷ್ಟೆ, ಸಮರ್ಪಣಾಭಾವ ನಿಷ್ಟೆ ಹಾಗೂ ಸಮರ್ಪಣಾಭಾವದಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದ ಜ್ಯಾಕ್, ಕಳೆದ ಒಂದು ದಶಕದ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ಸಾಥ್ ನೀಡುತ್ತಿದ್ದರು.

ಭಾವಪೂರ್ಣ ವಿದಾಯ
ಡೆಪ್ಯೂಟಿ ಕಮಾಂಡೆಂಟ್ ಎಸ್.ಎ.. ಮೈತ್ರೇಯಿ ನೇತೃತ್ವದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಗಳು ಅಗಲಿದ ಹೀರೋಗೆ ಭಾವಪೂರ್ಣ ವಿದಾಯ ಸಲ್ಲಿಸಿದರು.

ಏರ್‌ಪೋರ್ಟ್ ಆಡಳಿತ ಕಂಬನಿ
ಜ್ಯಾಕ್ ಸೇವೆ ಸ್ಮರಿಸಿಕೊಂಡಿರುವ ವಿಮಾನ ನಿಲ್ದಾಣ ಅಧಿಕಾರಿಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಕ್ಷಣೆಯಲ್ಲಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!