ಮೇಷ
ಇತರರ ಚಾಡಿ ಮಾತು ನಂಬದಿರಿ. ಅದರಿಂದ ನಿಮ್ಮ ನೆಮ್ಮದಿ ಹಾಳಾದೀತು. ಆಪ್ತರ ಬಗ್ಗೆ ಅಪನಂಬಿಕೆ ಬೇಡ. ವೃತ್ತಿಯಲ್ಲಿ ಸಫಲತೆ.
ವೃಷಭ
ಆರ್ಥಿಕ ಸಮಸ್ಯೆ ಕಾಡಲಿದೆ. ಮುಖ್ಯ ಕಾರ್ಯಕ್ಕೆ ಹಣ ಹೊಂದಿಸಲು ಕಷ್ಟ ಪಡುವಿರಿ. ನಯವಂಚಕರ ಕುರಿತು ಎಚ್ಚರವಿರಲಿ.
ಮಿಥುನ
ವೈಭೋಗದ ಜೀವನಕ್ಕೆ ಮನಸ್ಸು ತುಡಿಯಬಹುದು. ಅದನ್ನು ಪಡೆಯಲಾಗದ ಕೊರಗು ಕೂಡಾ ಕಾಡಬಹುದು.
ಕಟಕ
ಕಚೇರಿ ಅಥವಾ ಮನೆಯಲ್ಲಿ ಉದ್ವಿಗ್ನ ವಾತಾವರಣ. ಆದರೆ ಇಂತಹ ಪರಿಸ್ಥಿತಿ ನಿಮಗೆ ಹೊಸದಲ್ಲ. ನಿಭಾಯಿಸುವ ಕಲೆ ನಿಮಗೆ ತಿಳಿದಿದೆ.
ಸಿಂಹ
ಪ್ರತಿಕೂಲ ಬೆಳವಣಿಗೆ ಸಂಭವಿಸುವುದು. ಅದನ್ನು ದಿಟ್ಟವಾಗಿ ಎದುರಿಸಿ. ನಿಮ್ಮ ಹಿತಾಸಕ್ತಿ ಬಲಿಗೊಟ್ಟು ರಾಜಿಗೆ ಇಳಿಯದಿರಿ. ಆಪ್ತರ ಸಹಕಾರ ಲಭ್ಯ.
ಕನ್ಯಾ
ಆಪ್ತರ ಜತೆಗೆ ಮುನಿಸು ಉಂಟಾದೀತು. ಅವರ ಜತೆ ಸಹನೆಯಿಂದ ವ್ಯವಹರಿಸಿರಿ. ಆರ್ಥಿಕ ವ್ಯವಹಾರದಲ್ಲಿ ಅನ್ಯರ ಹಸ್ತಕ್ಷೇಪದಿಂದ ನಷ್ಟ.
ತುಲಾ
ನಿಮ್ಮ ಆಹಾರದ ಕುರಿತು ಎಚ್ಚರ ವಹಿಸಿ. ಹೊಟ್ಟೆ ಕೆಡುವ ಪ್ರಸಂಗ ಒದಗೀತು. ಮನೆಯಲ್ಲಿ ವಾಗ್ವಾದ ತಪ್ಪಿಸಿರಿ. ಹೊಂದಾಣಿಕೆ ಮುಖ್ಯ.
ವೃಶ್ಚಿಕ
ವೃತ್ತಿಯಲ್ಲಿ ಏಕಾಗ್ರತೆ ಮೂಡದು. ಸಮಸ್ಯೆಗಳು ಮನಸ್ಸನ್ನು ಕೊರೆಯುತ್ತಿರುತ್ತದೆ. ಕಾನೂನು ತೊಡಕಿನಿಂದ ದೂರವಿರಿ. ಬಂಧು ಭೇಟಿ.
ಧನು
ಪರಿಸ್ಥಿತಿಯೊಂದು ಉದ್ವಿಗ್ನತೆ ಸೃಷ್ಟಿಸಲಿದೆ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಯಾರದೇ ನಿಷ್ಠುರ ಕಟ್ಟಿಕೊಳ್ಳಲು ಹೋಗಬೇಡಿ.
ಮಕರ
ಖರ್ಚು ಅಧಿಕ. ಖರೀದಿಯ ಉತ್ಸಾಹ ನಿಯಂತ್ರಿಸಿ.ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ಅವಶ್ಯ. ಕೌಟುಂಬಿಕ ಶಾಂತಿ ನೆಲೆಸುವುದು.
ಕುಂಭ
ಮುಖ್ಯ ಯೋಜನೆ ತಲೆಕೆಳಗಾದೀತು. ಸಹನೆ ಕಳಕೊಳ್ಳದಿರಿ. ಎಲ್ಲರ ಜತೆ ಸೌಹಾರ್ದದಿಂದ ವ್ಯವಹರಿಸಿ. ಖರ್ಚು ಮಿತಿಯಲ್ಲಿರಲಿ.
ಮೀನ
ಕೆಲಸದಲ್ಲಿ ನಿರಾಸಕ್ತಿ. ಉದಾಸೀನತೆ ಕಾಡುವುದು. ಆದರೆ ನಿಮ್ಮ ಧ್ಯೇಯಕ್ಕೆ ಕುಂದು ಬಾರದಿರಲಿ. ಆರೋಗ್ಯ ಸಮಸ್ಯೆ ನಿವಾರಣೆ.