ಬಾಲಿವುಡ್ ಸಿಂಗರ್ ಬಾದ್‌ಶಾ ಒಡೆತನದ ರೆಸ್ಟೋರೆಂಟ್ ಬಳಿ ಸ್ಫೋಟ: ಹೊಣೆ ಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮುಂಬೈನಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕ್ಕಿ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇದೀಗ ಮತ್ತೊಂದು ಪ್ರಕರಣದ ಹೊಣೆ ಹೊತ್ತುಕೊಂಡಿದೆ.

ಬಾಲಿವುಡ್ ಸಿಂಗರ್, ರ್ಯಾಪರ್ ಬಾದ್‌ಶಾ ಒಡೆತನದ ರೆಸ್ಟೋರೆಂಟ್ ಹೊರಭಾಗದಲ್ಲಿ ನಡೆದ ಸ್ಫೋಟ ಪ್ರಕರಣದ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾನೆ.

ಚಂಡೀಘಡದಲ್ಲಿರುವ ಬಾದ್ ಶಾ ಒಡೆತದನ ಎರಡು ರೆಸ್ಟೋರೆಂಟ್ ಹೊರಭಾಗದಲ್ಲಿ ಸ್ಫೋಟ ಸಂಭವಿಸಿತ್ತು. ಮಂಗಳವಾರ ಮುಂಜಾನೆ ಇಬ್ಬರು ಅಪರಿಚಿತರು ಆಗಮಿಸಿ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಈ ಬಾಂಬ್ ಸ್ಫೋಟಗೊಂಡಿದೆ. ಅದೃಷ್ಠವಶಾತ್ ಯಾರೂ ಗಾಯಗೊಂಡಿಲ್ಲ. ರೆಸ್ಟೋರೆಂಟ್ ಸುತ್ತ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಫೋಟದ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಗೋಲ್ಡಿ ಬ್ರಾರ್ ಈ ಸ್ಫೋಟದ ಹೊಣೆ ಹೊತ್ತುಕೊಂಡ ಪೋಸ್ಟ್ ವೈರಲ್ ಆಗಿದೆ.

ಲಾರೆನ್ಸ್ ಬಿಷ್ಣೋಯ್ ಗ್ರೂಪ್ ಸದಸ್ಯರಾದ ನಾನು ಗೋಲ್ಡಿ ಬ್ರಾರ್ ಹಾಗೂ ರೋಹಿತ್ ಗೊದರಾ ಚಂಡಿಘಡದಲ್ಲಿ ನಡೆದ ಎರಡು ಸ್ಫೋಟದ ರೂವಾರಿ. ಈ ಸ್ಫೋಟವನ್ನು ನಾವು ಮಾಡಿದ್ದೇವೆ. ಬಾದ್ ಶಾ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಸಂಭವಿಸಿದೆ. ನಮ್ಮ ಕರೆಯನ್ನು ನಿರ್ಲಕ್ಷಿಸಿದರೆ, ಕರೆಯ ರಿಂಗ್ ಕೇಳಿಸಿದಿರುವ ಮಾಲೀಕರಿಗೆ ಈ ಸ್ಫೋಟದ ಶಬ್ಧ ಕೇಳಿಸಿರುತ್ತದೆ ಎಂದು ಗೋಲ್ಡಿ ಬ್ರಾರ್ ಸಂದೇಶ ರವಾನಿಸಿದ್ದಾನೆ.

ಸ್ಫೋಟದ ಸ್ಥಳ ಸುತ್ತುವರಿದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫೊರೆನ್ಸಿಕ್ ತಜ್ಞರು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಣೆಹೊತ್ತುಕೊಂಡ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!