Thursday, December 1, 2022

Latest Posts

ಜಿ 20 ಶೃಂಗಸಭೆ: ಪ್ರಧಾನಿ ಮೋದಿ, ಯುಎಸ್‌ ಅಧ್ಯಕ್ಷ ಬಿಡೆನ್ ಆತ್ಮೀಯ ಅಪ್ಪುಗೆ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿಯಲ್ಲಿ ಜಿ20 ಶೃಂಗಸಭೆ ಆರಂಭವಾಗುತ್ತಿದ್ದಂತೆ‌ ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಓಡೋಡಿ ಬಂದು ಆತ್ಮೀಯ ಅಪ್ಪುಗೆಯನ್ನು ನೀಡಿದರು. ಪ್ರಧಾನಿ ಕಾರ್ಯಾಲಯ ಹಂಚಿಕೊಂಡಿರುವ ಫೋಟೋದಲ್ಲಿ ಉಭಯ ನಾಯಕರು ಹಸ್ತಲಾಘವ ಮಾಡಿ, ಆತ್ಮೀಯವಾಗಿ ಮಾತನಾಡಿದ್ದಾರೆ.

ಭಾನುವಾರ ರಾತ್ರಿ ಬಾಲಿಗೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. “ಬಾಲಿಯಲ್ಲಿ ಆತ್ಮೀಯ ಸ್ವಾಗತಕ್ಕಾಗಿ ಭಾರತೀಯ ಸಮುದಾಯಕ್ಕೆ ಕೃತಜ್ಞತೆಗಳು!” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
G20 ಶೃಂಗಸಭೆಯ ಕಾರ್ಯಸೂಚಿಯ ಭಾಗವಾಗಿ- ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರದ ಕುರಿತು ಮೂರು ಕಾರ್ಯ ಅವಧಿಗಳು ನಡೆಯಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯ ಜೊತೆಗೆ ಅದರಲ್ಲಿ ಭಾಗವಹಿಸುವ ಹಲವಾರು ಇತರ ದೇಶಗಳ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಮತ್ತು ಅವರೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷರು ಜಿ 20 ಪ್ರೆಸಿಡೆನ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲಿದ್ದಾರೆ. ಭಾರತವು ಡಿಸೆಂಬರ್ 1, 2022 ರಿಂದ ಅಧಿಕೃತವಾಗಿ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. 2023 ರಲ್ಲಿ ಭಾರತದಲ್ಲಿ ನಡೆಯಲಿರುವ G20 ಶೃಂಗಸಭೆಯಲ್ಲಿ G20 ಸದಸ್ಯರು ಮತ್ತು ಇತರ ಆಹ್ವಾನಿತರಿಗೆ ಪ್ರಧಾನಿ ಮೋದಿ ವೈಯಕ್ತಿಕ ಆಹ್ವಾನಗಳನ್ನು ನೀಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!