Thursday, September 21, 2023

Latest Posts

ಜಿ-20 ಶೃಂಗಸಭೆ: ದೆಹಲಿಯಲ್ಲಿ ಸ್ಕೂಲ್, ಕಚೇರಿ, ಅಂಗಡಿ ಎಲ್ಲವೂ ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಯುವ ಹಿನ್ನೆಲೆ ಸೆ.08ರಿಂದ 10ರವರೆಗೆ ಶಾಲೆಗಳು, ಕಚೇರಿಗಳು ಹಾಗೂ ಅಂಗಡಿಗಳನ್ನು ಮುಚ್ಚಲಾಗುವುದು.

ಹೌದು, ಈ ಬಗ್ಗೆ ಸಿಎಂ ಅರವಿಂದ ಕೇಜ್ರಿವಾಲ್ ಮಾಹಿತಿ ನೀಡಿದ್ದು, ವಿಶ್ವದ ಅತಿದೊಡ್ಡ ಆರ್ಥಿಕತೆಗಳ ನಾಯಕರ ಸಭೆಯಾದ ಜಿ20 ಶೃಂಗಸಭೆ ಸೆ.9-10ರಂದು ನಡೆಯಲಿದೆ. ಟ್ರಾಫಿಕ್ ಸಮಸ್ಯೆ ಬಾರದಿರಲು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಅಂಗಡಿ, ಕಚೇರಿ ಹಾಗೂ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದಿದ್ದಾರೆ.

ಇತ್ತೀಚೆಗಷ್ಟೇ ಉದ್ಘಾಟನೆಯಾದ ಪ್ರಗತಿ ಮೈದಾನದ ಅತ್ಯಾಧುನಿಕ ಭಾರತ್ ಮಂಟಪದ ಸಮಾವೇಶ ಕೇಂದ್ರದಲ್ಲಿ ಸಭೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!