ಜಿ20 ಶೃಂಗಸಭೆ: ಭಾರತಕ್ಕೆ ಪ್ರಯಾಣ ಬೆಳೆಸಿದ ಅಮೆರಿಕ ಅಧ್ಯಕ್ಷ ಬಿಡೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ ದೆಹಲಿಯಲ್ಲಿ ಐತಿಹಾಸಿಕ ಜಿ20 ಶೃಂಗಸಭೆ ಆರಂಭವಾಗಲಿದ್ದು, ಇಂದು ಸಂಜೆಯೊಳಗೆ ಬಹುತೇಕ ಎಲ್ಲ ದೇಶದ ಗಣ್ಯರು ಭಾರತಕ್ಕೆ ಆಗಮಿಸಲಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಈಗಾಗಲೇ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಪ್ರವಾಸಕ್ಕೂ ಮುನ್ನ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳ ಕೋವಿಡ್ ಮಾರ್ಗಸೂಚಿಯನ್ನು ಅವರು ಅನುಸರಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಡೆನ್ ಪತ್ನಿ ಜಿಲ್‌ಗೆ ಕೋವಿಡ್ ಸೋಂಕು ತಗುಲಿತ್ತು. ಇದರಿಂದಾಗಿ ಬಿಡೆನ್ ಕೂಡ ಪರೀಕ್ಷೆಗೆ ಒಳಗಾಗಿದ್ದರು. ಜಿಲ್ ಹಾಗೂ ಬಿಡೆನ್ ಇಬ್ಬರ ಕೋವಿಡ್ ವರದಿ ನೆಗೆಟಿವ್ ಬಂದ ನಂತರ ಭಾರತಕ್ಕೆ ಅಮೆರಿಕ ಅಧ್ಯಕ್ಷರು ಪ್ರಯಾಣ ಬೆಳೆಸಿದ್ದಾರೆ.

ಬಿಡೆನ್ ಹೊರಡುವ ಗಂಟೆಗೂ ಮುನ್ನ ಶ್ವೇತಭವನ ಮಾಹಿತಿ ನೀಡಿದ್ದು, ಬಿಡೆನ್ ಅವರ ಕೋವಿಡ್ ಪರೀಕ್ಷೆ ಆಗಿದೆ, ವರದಿ ನೆಗೆಟಿವ್ ಬಂದಿದೆ. ಜಿಲ್ ಅವರು ಡೆಲವೇರ್ ಮನೆಯಲ್ಲಿ ಕ್ವಾರೆಂಟೀನ್ ಆಗಿದ್ದಾರೆ. ಅಧ್ಯಕ್ಷರ ಜೊತೆಯಲ್ಲಿ ಪ್ರಯಾಣ ಮಾಡುತ್ತಿಲ್ಲ ಎಂದು ತಿಳಿಸಿದೆ.

ಇಂದು ಸಂಜೆ ನವದೆಹಲಿಗೆ ಬಿಡೆನ್ ಆಗಮಿಸಲಿದ್ದಾರೆ. ಅವರನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಮತ್ತು ನಾಗರಿಕ ವಿಮಾನಯಾನ ಜನರಲ್ ವಿ.ಕೆ. ಸಿಂಗ್ ಅವರು ಸ್ವಾಗತಿಸಲಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!