ಹೊಸದಿಗಂತ ವರದಿ, ಕಲಬುರಗಿ:
ಪಾದಚಾರಿ ಮೇಲೆ ಟ್ರ್ಯಾಕ್ಟರ್,ನ ಹಿಂಬದಿಯ ಟೇಲರ್ ಹರಿದ ಪರಿಣಾಮ ಸ್ಥಳದಲ್ಲೇ ಪಾದಚಾರಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಅಫಜಲಪುರ ಪಟ್ಟಣದ ನಿವಾಸಿ ಬರ್ಮಾ ದಂಡಗೂಲೆ (45) ಮೃತ ದುರ್ದೈವಿಯಾಗಿದ್ದಾರೆ. ಪಟ್ಟಣದ ನಿಂಬಾಳ್ ಪೆಟ್ರೋಲ್ ಬಂಕ್ ಬಳಿ
ಮುಂಜಾನೆ ರಸ್ತೆ ಪಕ್ಕದಲ್ಲಿ ಬರ್ಮಾ ಹೊರಟಿದ್ದ ವೇಳೆ, ಟ್ಯಾಕ್ಟರ್ ಇಂಜಿನ್ ಗೆ ಅಳವಡಿಸಿದ್ದ ಟೇಲರ್ ಸಂಪರ್ಕ ಕಡಿತಗೊಂಡು ಅವರ ಮೇಲೆ ಹರಿದಿದೆ.
ಘಟನೆಯ ದೃಶ್ಯವು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.