ಇಂದಿನಿಂದ ರಾಜ್ಯಾದ್ಯಂತ ಗಂಧದಗುಡಿ ಸಿನಿಮಾ ಟಿಕೆಟ್ ದರ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻಕರ್ನಾಟಕ ರತ್ನʼ ಪುನೀತ್​ ರಾಜ್​ಕುಮಾರ್​ ಅವರ ಕನಸಿನ ‘ಗಂಧದ ಗುಡಿ’ ಸಾಕ್ಷ್ಯಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಮೆಚ್ಚುಗೆ ಸಿಕ್ಕಿದೆ. ಅಕ್ಟೋಬರ್​ 28ರಂದು ರಿಲೀಸ್​ ಆದ ಬಳಿಕ ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಇಂದಿನಿಂದ ರಾಜ್ಯಾದ್ಯಂತ ಎಲ್ಲಾ ಕಡೆ ಗಂಧದಗುಡಿ ಸಿನಿಮಾ ಟಿಕೆಟ್ ದರ ಇಳಿಕೆಯಾಗಿದೆ. ಈ ಕುರಿತು ನಿನ್ನೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟ್ವೀಟ್‌ ಕೂಡಾ ಮಾಡಿದ್ದಾರೆ.

ಅದರಲ್ಲೂ ಇದೀಗ ಈ ಸಾಕ್ಷ್ಯಚಿತ್ರವನ್ನು ಮಕ್ಕಳು ನೋಡಬೇಕು ಎಂಬುದು ಪುನೀತ್​ ರಾಜ್​ಕುಮಾರ್ ಅವರ ಬಯಕೆ ಆಗಿತ್ತು. ಅನೇಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಮಕ್ಕಳಿಗೆ ಅನುಕೂಲ ಆಗುವ ರೀತಿಯಲ್ಲಿ ಟಿಕೆಟ್​ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಈ ಕುರಿತು ‘ಪಿಆರ್​ಕೆ ಪ್ರೊಡಕ್ಷನ್ಸ್​’ ವತಿಯಿಂದ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.

07-11-2022 ಸೋಮವಾರದಿಂದ 10-11-2022 ಗುರುವಾರದವರೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 56 ರೂಪಾಯಿಗಳಿಗೆ  ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಜ್ಯದಾದ್ಯಂತ 112 ರೂಗಳಿಗೆ ಟಿಕೆಟ್‌ ಸಿಗಲಿದೆ. ನಮ್ಮ ಮಕ್ಕಳ ನಾಳೆಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿ ತೋರಿಸೋಣ’ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!