ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಂಭ್ರಮದ ಗಣೇಶನ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಬ್ಬ ಹಿಂದೂಗಳಿಗೆ ವಿಶೇಷವಾದ ಹಬ್ಬವಾಗಿದೆ. ಈ ಹಬ್ಬದ ಆಚರಣೆ ಆರಂಭವಾಗಿದ್ದು ಹೇಗೆ? ಇದರ ಕಥೆ ಏನು?
ಒಮ್ಮೆ ಪಾರ್ವತಿ ಸ್ನಾನಕ್ಕೆ ಹೋಗುವ ಮುನ್ನ ಸ್ನಾನಕ್ಕೆ ಹೋಗುವ ಮುನ್ನ ಒಂದು ಗೊಂಬೆಯನ್ನು ಮಾಡಿ ಅದಕ್ಕೆ ಜೀವವನ್ನು ಕೊಡುತ್ತಾಳೆ. ನಂತರ ಆ ಹುಡುಗನನ್ನು ಕಾವಲುಗಾರನನ್ನಾಗಿ ಇಟ್ಟು ತಾನು ಸ್ನಾನ ಮಾಡಿ ಬರುವವರೆಗೆ ಯಾರನ್ನೂ ಒಳಗೆ ಬಿಡಬೇ ಡ ಅಂತ ಹೇಳಿ ಒಳಗೆ ಹೋಗುತ್ತಾನೆ. ಅದಂತೆ ಕಾವಲುಗಾರ ಹುಡುಗು ಮನೆಯೊಳಗೆ ಯಾರನ್ನೂ ಬಿಡುವುದಿಲ್ಲ. ಅದೇ ಸಂದರ್ಭದಲ್ಲಿ ಶಿವನು ಬಂದು ಮನೆಯೊಳಗೆ ಹೋಗಲು ಮುಂದಾಗುತ್ತಾನೆ. ಆದರೆ ಕಾವಲುಗಾರ ಹುಡುಗು ಶಿವನಿಗೂ ಒಳಗಡೆ ಹೋಗಲು ಪ್ರವೇಶ ನೀಡುವುದಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆಯೇ ಮಾತಿನ ಜಟಾಪಟಿ ನಡೆಯುತ್ತೆ. ಇದರಿಂದ ಕೋಪಗೊಂಡು ಶಿವ ತನ್ನ ತ್ರಿಶೂಲದಿಂದ ಹುಡುಗನ ತಲೆಯನ್ನು ಕಡಿಯುತ್ತಾನೆ
ಸ್ನಾನ ಮುಗಿಸಿ ಬಂದ ಪಾರ್ವತಿ ಹುಡುಗ ತಲೆ ಕಡಿದಿರುವುದನ್ನು ಕಂಡ ಗೋಳಾಡುತ್ತಾಳೆ. ಈಕೆಯನ್ನು ಸಮಾಧಾನ ಮಾಡುವ ಸಲುವಾಗಿ ಶಿವನು ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿರುವ ವ್ಯಕ್ತಿಯ ತಲೆಯನ್ನು ಕಡಿದು ತನ್ನ ಎಂದು ತನ್ನ ಬೆಂಬಲಿಗರಿಗೆ ಆದೇಶಿಸುತ್ತಾನೆ. ಅದರಂತೆ ಉತ್ತರಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆಯನ್ನು ಕಡಿದು ತರುತ್ತಾರೆ. ಹುಡುಗನಿಗೆ ಆನೆಯ ತಲೆಯನ್ನು ಜೋಡಿಸಿ ಜೀವವನ್ನು ನೀಡಲಾಗುತ್ತದೆ. ನಂತರ ಈಶ್ವರನ ಸೂಚನೆಯಂತೆ ಎಲ್ಲಾ ದೇವತೆಗಳು ಗಣಪತಿಯನ್ನು ಪೂಜಿಸುತ್ತಾರೆ.
ಪ್ರತಿ ವರ್ಷ ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಈ ವರ್ಷ 2024ರ ಸೆಪ್ಟೆಂಬರ್ 7 ರಂದು (ಶನಿವಾರ) ಗಣೇಶ ಉತ್ಸವ ಆರಂಭವಾಗುತ್ತಿದೆ. ಒಟ್ಟು 10 ದಿನಗಳ ಅದ್ಧೂರಿ ಉತ್ಸವ ಬಳಿಕ ನಿಮಜ್ಜನ ಮಾಡಲಾಗುತ್ತದೆ.