ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನ ಸಮಸ್ತ ಜನತೆಗೂ ಗಣೇಶ ಚತುರ್ಥಿಯ ಶುಭಾಷಯಗಳು, ಪ್ರತಿ ಮನೆಯೂ ಇಂದು ಹೊಸ ಕಳೆಯನ್ನು ಪಡೆಯುತ್ತದೆ. ವಿಧವಾದ ರಂಗೋಲಿ, ತಳಿರು ತೋರಣ, ಬಣ್ಣ ಬಣ್ಣದ ಹೂಗಳು, ಹೊಸ ಬಟ್ಟೆ, ಗಣೇಶನಿಗೆ ಅಲಂಕಾರ, ಗೌರಿ ದೇವಿಗೆ ಪೂಜೆ..
ಯಾವುದೇ ಹಬ್ಬದಲ್ಲಿಯೂ ಮೊದಲ ಪೂಜೆ ಗಣೇಶನಿಗೇ ಯಾಕೆ ಮಾಡಲಾಗುತ್ತದೆ?
ಯಾವುದೇ ರೀತಿಯ ಶುಭ-ಸಮಾರಂಭಗಳನ್ನು ಆಚರಿಸುವ ಮೊದಲು ಗಣೇಶನಿಗೆ ಪೂಜೆಯನ್ನು ಮಾಡಲಾಗುತ್ತದೆ. ಸ್ವಾಮಿಯ ಮುಂದೆ ಕುಳಿತು ಪ್ರಾರ್ಥಿಸಬೇಕು. ಎಲ್ಲರೂ ಸಂಪೂರ್ಣವಾಗಿ ಗಮನಹರಿಸಬೇಕು. ‘ಗಣಪತಿ ದೇವರು ನಮಗೆ ಸಮಸ್ಯೆಗಳನ್ನು ನಿವಾರಿಸುವವನಾಗಿದ್ದಾನೆ. ಯಾವುದೇ ಕಾರ್ಯಕ್ರಮ ಅಥವಾ ಪೂಜೆಯೇ ಆಗಲಿ ಗಣಪನನ್ನು ಮೊದಲು ನೆನೆಸಿಕೊಳ್ಳಲಾಗುತ್ತದೆ. ಯಾವುದೇ ಅಡ್ಡಿ ಆತಂಕವಿಲ್ಲದೆ ಕಾರ್ಯಕ್ರಮ ಸಂಪನ್ನವಾಗಲಿ ಎಂದು ಪೂಜಿಸಲಾಗುತ್ತದೆ. ಗಣೇಶ ವಿಘ್ನ ವಿನಾಶಕ, ಸಮಸ್ಯೆಗಳನ್ನು ನಿವಾರಿಸಿ ಎಲ್ಲವೂ ಸಂಪನ್ನವಾಗುವಂತೆ ಆತ ಕಾಪಾಡುತ್ತಾನೆ ಎಂದು ನಂಬಲಾಗಿದೆ.