ಗಣೇಶನ ಲಡ್ಡುಗೆ ಭಾರೀ ಬೇಡಿಕೆ: ಸಾವಿರ ಅಲ್ಲ…ಲಕ್ಷಗಳಲ್ಲಿ ಹರಾಜಾದ ಲಡ್ಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದೆಲ್ಲೆಡೆ ನಡೆಯುವ ಗಣೇಶೋತ್ಸವದಲ್ಲಿ ಹಲವೆಡೆ ಲಡ್ಡುಗೆ ಭಾರೀ ಬೇಡಿಕೆಯಿರುತ್ತದೆ. ಗಣಪತಿಗಾಗಿ ಮಾಡಿಸಿರುವ ಭಾರೀ ತೂಕದ ಲಡ್ಡುಗಳನ್ನು ಕೊನೆಗೆ ಹರಾಜು ಮಾಡಲಾಗುತ್ತದೆ ಅದರಲ್ಲಿ ಈ ಬಾರಿ ಒಂದು ಲಡ್ಡು ಬರೋಬ್ಬರಿ 60.83 ಲಕ್ಷ ರೂಗೆ ಹರಾಜಾಗಿದೆ. ಬಾಳಾಪುರ ಲಡ್ಡು 24.60 ಲಕ್ಷ ರೂ.ಗೆ ಮಾರಾಟವಾದರೆ, ಸನ್‌ಸಿಟಿ ಕೀರ್ತಿ ರಿಚ್‌ಮಂಡ್ ಗೇಟೆಡ್ ಕಮ್ಯುನಿಟಿ ವಿಲ್ಲಾಗಳಲ್ಲಿ ಗಣೇಶ ಲಡ್ಡು 60.83 ಲಕ್ಷ ರೂಗೆ ಮಾರಾಟವಾಗಿದೆ. RV ಚಾರಿಟೇಬಲ್ ಟ್ರಸ್ಟ್ 60.83 ಲಕ್ಷಕ್ಕೆ ಸ್ವಾಧೀನಪಡಿಸಿಕೊಂಡಿದೆ.

ಈ ಹರಾಜಿನಿಂದ ಬರುವ ಹಣವನ್ನು ಎನ್‌ಜಿಒಗಳಿಗೆ ನಿಧಿಯ ರೂಪದಲ್ಲಿ ನೀಡಲಾಗುವುದು ಎಂದು ರಿಚ್‌ಮಂಡ್ ವಿಲ್ಲಾ ಸದಸ್ಯರು ತಿಳಿಸಿದ್ದಾರೆ. ಮತ್ತೊಂದೆಡೆ ಅಲ್ವಾಲ್ ವ್ಯಾಪ್ತಿಯ ಕಣಜಿಗುಡದಲ್ಲೂ ಗಣೇಶ ಲಡ್ಡೂಗೆ ಭಾರಿ ಬೆಲೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!