ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಯುವಕನ ಹತ್ಯೆ: ಮೂವರ ಬಂಧನ

ಹೊಸದಿಗಂತ ವರದಿ, ವಿಜಯಪುರ:

ಫೇಸ್ಬುಕ್ ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ಯುವಕನ ಹತ್ಯೆಗೈದಿರುವ ಆರೋಪಿಗಳನ್ನು ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಘು ಕಣಮೇಶ್ವರ, ತುಳಸಿರಾಮ ಹರಿಜನ, ಗುರುಸಿದ್ದ ಡೋಣಿ ಬಂಧಿತ ಆರೋಪಿಗಳು. ‌
ಇವರು ರಮೇಶ ಧಾರಸಂಗ ಎಂಬ ವ್ಯಕ್ತಿಯನ್ನು ನಗರದಲ್ಲಿ ಬರ್ಬರವಾಗಿ ಹತ್ಯೆಗೈದು ಕುಮಟಗಿ ತಾಂಡಾದಲ್ಲಿ ಮೃತ ದೇಹ ಎಸೆದು ಪರಾರಿಯಾಗಿದ್ದರು.
ಹತ್ಯೆಗೆ ಬಳಸಿರುವ ಎರಡು ಬೈಕ್, ಒಂದು ಕಾರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!