ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಯುವಕರ ಬಂಧನ

ಹೊಸದಿಗಂತ ವರದಿ ಮದ್ದೂರು :

ತಾಲ್ಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ  ಯುವತಿಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಮ್ಮ ಮಗಳನ್ನು ಪುಸಲಾಯಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆಂದು ಪೋಷಕರು, ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪುನೀತ್, ಮಂಜುನಾಥ್ ಹಾಗೂ ಸಿದ್ದಾರ್ಥ ಎಂಬ ಮೂವರು ಯುವಕರು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ

ಯುವತಿಯು ದ್ವಿತೀಯ ಪಿಯುಸಿ ಓದುತ್ತಿದ್ದು, ಮೈಸೂರಿನಲ್ಲಿ ನಡೆದ ಯುವ ದಸರಾಗೆ ತೆರಳಿದ್ದ ಸಂದರ್ಭದಲ್ಲಿ ಯುವಕ ಪುನೀತ್ ಪರಿಚಯವಾಗಿದ್ದು, ನನ್ನ ಮಗಳನ್ನು ಲವ್ ಮಾಡುತ್ತೇನೆ, ನೀನಿಲ್ಲದೇ ಬದುಕೋದಿಲ್ಲ ಎಂಬುದಾಗಿ ಪದೇ ಪದೇ ಆಕೆಯನ್ನು ಪೀಡಿಸುತ್ತಿದ್ದ.

ಕಳೆದ ನ.4ರಂದು ಸುಮಾರು 11 ಗಂಟೆಗೆ ನನ್ನ ಮಗಳನ್ನು ಕೆ ಎಂ ದೊಡ್ಡಿಯಿಂದ ಮದ್ದೂರಿಗೆ ಕರೆದುಕೊಂಡು ಬಂದು, ಮದ್ದೂರು ಬಸ್ ನಿಲ್ದಾಣದಲ್ಲಿ ಮ್ಯಾಂಗೋ ಜ್ಯೂಸ್ ಕುಡಿಸಿದ್ದು, ನಂತರ ಆಕೆಯನ್ನು ಶಿವಪುರದ  ಲಾಡ್ಜ್ ವೊಂದಕ್ಕೆ ಕರೆದುಕೊಂಡು ನನ್ನ ಮಗಳ ಮೇಲೆ ಪುನೀತ್ ಅತ್ಯಾಚಾರವೆಸಗಿದ್ದಾನೆ.

ನಂತರ  ಆತನ ಸ್ನೇಹಿತರಾದ ಮಂಜುನಾಥ ಹಾಗೂ ಸಿದ್ಧಾರ್ಥ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಪೋಷಕರು ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರದ ಸಂದರ್ಭದಲ್ಲಿ ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವನ್ನು ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.

ಆಗ ನನ್ನ ಮಗಳು ಯಾರಿಗೂ ಈ ವಿಷಯವನ್ನು ಹೇಳೆದೋದಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲದೇ ನನ್ನ ಮಗಳ ಮೊಬೈಲ್ ಗೆ ಅತ್ಯಾಚಾರ ನಡೆಸಿದ ದೃಶ್ಯಾವಳಿಯ ವೀಡಿಯೋ ಕಳುಹಿಸಿ, ನಾನು ಕರೆದಾಗಲೆಲ್ಲ ನೀನು ಬರಬೇಕು ಇಲ್ಲವಾದಲ್ಲಿ ಈ ವೀಡಿಯೋ ಸೋಷಿಯಲ್ ಮೀಡಿಯದಲ್ಲಿ ಹಾಕುವುದಾಗಿ ಬೆದರಿಕೆವೊಡ್ಡಿದ್ದಾರೆಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೂವರು ಅತ್ಯಾಚಾರಿ ಆರೋಪಿಗಳ ಮೇಲೆ ಕಲಂ 114, 323, 324, 363, 360, 367 ಸೇರಿದಂತೆ ಜಾತಿನಿಂದನೆ ಕೇಸ್ ದಾಖಲಿಸಿಕೊಂಡು ವಿಚಾರಣೆ ಕೈಗೊಳ್ಳಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!