ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ವಕೀಲರ ಮನೆ ಬಾಂಬ್ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಇತ್ತೀಚೆಗೆ ಗುಂಡೇಟಿಗೆ ಬಲಿಯಾಗಿದ್ದ ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ವಕೀಲರ ಮನೆ ಬಾಂಬ್ ದಾಳಿ ನಡೆದಿದೆ.
ಪ್ರಯಾಗ್ ರಾಜ್ ನಲ್ಲಿ ಈ ಘಟನೆ ವರದಿಯಾಗಿದ್ದು, ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅತೀಕ್ ಅಹ್ಮದ್ ಒಂದು ವೇಳೆ ತನಗೆ ಅನಾಹುತ ಸಂಭವಿಸಿ ಹತ್ಯೆಯಾದಲ್ಲಿ ಪತ್ರವೊಂದನ್ನು ಯುಪಿ ಸಿಎಂ ಹಾಗೂ ಸಿಜೆಐ ಗೆ ತಲುಪಿಸಲು ಸೂಚಿಸಿದ್ದ ಆ ಪತ್ರ ಈಗ ಸಿಎಂ ಹಾಗೂ ಸಿಜೆಐ ಗೆ ತಲುಪಲಿದೆ ಎಂದು ಅತೀಕ್ ಅಹ್ಮದ್ ನ ವಕೀಲರಾದ ವಿಜಯ್ ಮಿಶ್ರಾ ಹೇಳಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ನಿವಾಸದ ಮೇಲೆ ಬಾಂಬ್ ದಾಳಿ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!