ತನ್ನ ಏರಿಯಾ ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಕೋತಿಗಳ ಗ್ಯಾಂಗ್ ವಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮನುಷ್ಯರ ನಡುವೆ ಗುಂಪು ಘರ್ಷಣೆ ನಡೆಯುವುದು ನಾವು ನೋಡಿರುತ್ತೇವೆ. ಕೇಳಿರುತ್ತೇವೆ. ಆದರೆ ಕೋತಿಗಳು ಸಹ ಮತ್ತೊಂದು ಗುಂಪಿನ ಜತೆ ಕಾದಾಟಕ್ಕಿಳಿದಿರುವ ದೃಶ್ಯ ಈಗ ಭಾರೀ ವೈರಲ್​ ಆಗುತ್ತಿದೆ.
ತನ್ನ ಏರಿಯಾ ಬಾರ್ಡರ್ ಕ್ರಾಸ್ ಮಾಡಿದಕ್ಕೆ ಕೋತಿಗಳ ಎರಡು ಗುಂಪುಗಳ ನಡುವೆ ಜಗಳವಾಗಿದೆ.
ಹನೂರಿನ ಸಂತೇಪೇಟೆ ಬೀದಿಯಲ್ಲಿ ಈ ಘಟನೆ ನಡೆದಿದೆ. ಹನುಮನು ನೆಲೆಸಿದ ನೆಲೆಬೀಡಾದ ಹನೂರಿನಲ್ಲಿ (ಹನುಮಪುರಿ) ಸಾವಿರಾರು ವಾನರಗಳು ನೆಲೆಸಿದ್ದು, ಪ್ರತಿ ಬಡಾವಣೆಯಲ್ಲಿ ತನ್ನದೇಯಾದ ಬಳಗವನ್ನು ಹೊಂದಿವೆ.
ಒಂದು ಬಡಾವಣೆಯಲ್ಲಿರುವ ಕೋತಿಗಳು ಇನ್ನೊಂದು ಬೀದಿಗೆ ಲಗ್ಗೆ ಹಾಕಲು ಮೂಲ‌ನಿವಾಸಿ ಕೋತಿಗಳ ಬಿಡುವುದಿಲ್ಲ. ಅದೇ ರೀತಿ ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಸುಮಾರು 15ಕ್ಕೂ ಹೆಚ್ಚು ಕೋತಿಗಳ ಹಿಂಡು ಸಂತೆಪೇಟೆ ಬೀದಿಗೆ ಲಗ್ಗೆ ಇಟ್ಟಿದ್ದವು. ಇದರಿಂದ ರೊಚ್ಚಿಗೆದ್ದ ವಿರೋಧಿ ಕೋತಿಗಳ ಗುಂಪುಗಳು ಜಗಳಕ್ಕಿಳಿದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!