ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಪಕ್ಷ: ಸಿಎಂ ಬೊಮ್ಮಾಯಿ ವಾಗ್ದಾಳಿ

ಹೊಸದಿಗಂತ ವರದಿ,ಕಲಬುರಗಿ:

ದೇಶದಲ್ಲಿ 70 ವಷ೯ಗಳ ಕಾಲ ಆಡಳಿತ ನಡೆಸಿ, 2ಜಿ,ಕಾಮನ್ವೆಲ್ತ್ ಗೇಮ್ ಸೇರಿದಂತೆ ಹಲವು ಹಗರಣಗಳಲ್ಲಿ ಪ್ರಮುಖ ಪಾತ್ರವಾದ ಕಾಂಗ್ರೆಸ್ ಪಕ್ಷವೂ,ಭ್ರಷ್ಟಾಚಾರದ ಗಂಗೋತ್ರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಅವರು ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ನಗರ ಜಿಲ್ಲಾ, ಬೀದರ್, ಯಾದಗಿರಿ, ಕಲಬುರಗಿ ಗ್ರಾಮಾಂತರ ಮಟ್ಟದ ವಿಭಾಗದ ಕಾಯ೯ಕತ೯ರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಅಸ್ಥಿಪಂಜರದಲ್ಲಿ ಎಷ್ಟು ಹಗರಣಗಳಿವೆ ಎಂದು ಹುಡುಕಬೇಕಾಗುತ್ತದೆ. ದೇಶದಿಂದ ಕಾಂಗ್ರೆಸ್ ಪಕ್ಷ ದಿನ ಕಳೆದಂತೆ ನಶಿಸಿ ಹೋಗುತ್ತಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ನಾಶದ ಹಂತದಲ್ಲಿ ಬಂದು ನಿಂತಿದೆ ಎಂದರು.

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಹಿನಾಯ ಸೋಲಿನ ರುಚಿಯನ್ನು ನೋಡಿದ ಕಾಂಗ್ರೆಸ್ ತನ್ನ ಅಸ್ಥಿತ್ವವನ್ನೆ ಕಳೆದುಕೊಂಡಿದೆ. ಡಿ.ಕೆ.ಶಿವಕುಮಾರ್ ನಾನೆ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸಿದ್ದರಾಮಯ್ಯ ಕೂಡ ನಾನೆ ಮುಖ್ಯಮಂತ್ರಿ ಎಂದು ತಿರುಗಾಡುತ್ತಿದ್ದಾರೆ. ಇವರಿಬ್ಬರು ಮುಖ್ಯಮಂತ್ರಿ ಕನಸುಗಳನ್ನು ಕಾಣುತ್ತಾ ತಿರುಗಾಟ ನಡೆಸುತ್ತಿದ್ದಾರೆ ಎಂದ ಅವರು,ಕಾಂಗ್ರೆಸ್ ಪಕ್ಷದ ಹಗಲುಗನಸು ಇಡೇರಲು ಸಾಧ್ಯವಿಲ್ಲ ಎಂದರು.

5 ವಷ೯ದ ಅಭಿವೃದ್ಧಿ ಪರ ಆಡಳಿತವೇ ನಮಗೆ ಶ್ರೀರಕ್ಷೆ

ಕೇಂದ್ರದಲ್ಲಿ ನರೇಂದ್ರ ಮೋದಿಯವರ ಹಾಗೂ ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತವೇ ನಮಗೆ ಶ್ರೀರಕ್ಷೆ ಆಗಲಿದೆ ಎಂದರು.

ಬಿಜೆಪಿ ಪಕ್ಷದ ಆಡಳಿತದ ಅವಧಿಯಲ್ಲಿ ನೀಡಿದ ಹಲವು ಯೋಜನೆಗಳನ್ನು ಜನರಿಗೆ ಮುಟ್ಟಿಸಿ,ಮುಂಬರುವ 2023 ಸಾವ೯ತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದರು.

ದೇಶದ ಅಖಂಡತೆ,ಭದ್ರತೆ ಬಗ್ಗೆ ವಿಚಾರ ಮಾಡುವ ದೊಡ್ಡ ನಾಯಕತ್ವ ನಮ್ಮ ದೇಶದಲ್ಲಿದೆ. ಶತ್ರೂ ರಾಷ್ಟ್ರಗಳು ಸಹ ತಮ್ಮ ನಿಲುವನ್ನು ಭಾರತದ ವಿರುದ್ಧ ಬದಲಾಯಿಸಿಕೊಂಡಿದ್ದು, ತಲೆ ಎತ್ತಿ ನೋಡುವಂತೆ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!