ಫಿಲ್ಮ್‌ಫೇರ್‌ನಲ್ಲಿ ಬರೋಬ್ಬರಿ 10 ಪ್ರಶಸ್ತಿ ಬಾಚಿದ ‘ಗಂಗೂಬಾಯಿ ಕಾಠಿಯಾವಾಡಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರೀ ವಿವಾದದ ನಡುವೆಯೂ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ ಕಳೆದ ವರ್ಷ ರಿಲೀಸ್ ಆಗಿದ್ದು, ಸಿನಿಮಾ ನೋಡಿ ಅಭಿಮಾನಿಗಳು ಮಂತ್ರಮುಗ್ಧರಾಗಿದ್ದು, ಸಿನಿಮಾ ಮೇಕಿಂಗ್ ಹಾಗೂ ಆಲಿಯಾ ಭಟ್ ನಟನೆಗೆ ಜನ ಮನಸೋತಿದ್ದರು.

Gangubai Kathiawadi: The real-life story of the matriach played by Alia  Bhatt in the new Bollywood movie | GQ Indiaನಿನ್ನೆ ರಾತ್ರಿ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ನಡೆದಿದ್ದು, ಎಲ್ಲೆಡೆ ಗಂಗೂ ಸದ್ದು ಮಾಡಿದೆ. ಸಮಾರಂಭದಲ್ಲಿ ಬರೋಬ್ಬರಿ 10 ಪ್ರಶಸ್ತಿಯನ್ನು ಸಿನಿಮಾ ಬಾಚಿಕೊಂಡಿದೆ.

Gangubai Kathiawadi' trailer: Fans point out 'spoiler' on Alia  Bhatt-Shantanu's romance | Bollywood Newsಸ್ಟಾರ್ ಕಿಡ್, ನೆಪೋ ಕಿಡ್ ಎಂದು ಆಲಿಯಾ ಭಟ್‌ರನ್ನು ಸಾಕಷ್ಟು ಟೀಕೆಗೆ ಒಳಪಡಿಸಲಾಗಿತ್ತು. ಆದರೆ ಆಲಿಯಾ ಪ್ರತಿ ಸಿನಿಮಾದಲ್ಲಿಯೂ ತಮ್ಮ ಆಕ್ಟಿಂಗ್ ಮೂಲಕ ಜನರನ್ನು ಅಚ್ಚರಿಗೊಳಿಸುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ 100 ಕ್ಕೂ ಹೆಚ್ಚು ಕೋಟಿ ರೂಪಾಯಿ ಬಾಚಿದ ಸಿನಿಮಾಕ್ಕೆ ಫಿಲ್ಮ್‌ಫೇರ್‌ನಲ್ಲಿಯೂ ಮನ್ನಣೆ ಸಿಕ್ಕಿದೆ.

Gangubai Kathiawadi': Review | Reviews | Screenಯಾವೆಲ್ಲಾ ಅವಾರ್ಡ್?

  • ಅತ್ಯುತ್ತಮ ನಟಿ: ಆಲಿಯಾ ಭಟ್
  • ಅತ್ಯುತ್ತಮ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ
  • ಅತ್ಯುತ್ತಮ ಸಂಭಾಷಣೆ: ಪ್ರಕಾಶ್ ಕಪಾಡಿಯಾ ಹಾಗೂ ಉತ್ಕರ್ಷಿಣಿ ವಸಿಷ್ಠ
  • ಅತ್ಯುತ್ತಮ ಹಿನ್ನೆಲೆ ಸಂಗೀತ: ಸಂಚಿತ್ ಬಲ್ಹಾರಾ-ಅಂಕಿತ್ ಬಲ್ಹಾರಾ
  • ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸುಬ್ರತಾ ಅಮಿತ್
  • ಅತ್ಯುತ್ತಮ ವಸ್ತ್ರವಿನ್ಯಾಸ: ಶೀತಲ್ ಇಕ್ಬಾಲ್ ಶರ್ಮಾ
  • ಅತ್ಯುತ್ತಮ ಕೊರಿಯೋಗ್ರಫಿ: ಕೃತಿ ಮಹೇಶ್
  • ಅತ್ಯುತ್ತಮ ಸಿನಿಮಾಟೋಗ್ರಫಿ: ಸುದೀಪ್ ಚಟರ್ಜಿ
  • ಅತ್ಯುತ್ತಮ ಅಪ್‌ಕಮಿಂಗ್ ಮ್ಯೂಸಿಕಲ್ ಟ್ಯಾಲೆಂಟ್: ಶ್ರೀಮಂಕರ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!