ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ರಿಲೀಸ್ಗೆ ಇದ್ದ ಆತಂಕ ನಿವಾರಣೆಯಾಗಿದೆ. ಗಂಗೂಬಾಯಿ ದತ್ತುಪುತ್ರ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿದ್ದರು. ರಿಲೀಸ್ಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿದೆ.
ಇದೀಗ ಯಾವುದೇ ಆತಂಕ ಇಲ್ಲದೆ ಅಂದುಕೊಂಡಂತೆಯೇ ಗಂಗೂಗಾಯಿ ನಾಳೆ ತೆರೆಕಾಣಲಿದೆ. ಕಾಮಾಟಿಪುರದ ಲೇಡಿ ಡಾನ್ ಆಗಿ ಮೆರೆದ ಗಂಗೂಬಾಯಿ ಜೀವನಾಧಾರಿತ ಸಿನಿಮಾ ಇದಾಗಿದೆ. ಗಂಗೂಬಾಯಿಯನ್ನು ವೇಶ್ಯೆಯಂತೆ ಬಿಂಬಿಸಲಾಗಿದೆ ಎಂದು ಗಂಗೂಬಾಯಿ ದತ್ತುಪುತ್ರ ಕೋರ್ಟ್ ಮೆಟ್ಟಿಲೇರಿದ್ದರು.