ರಷ್ಯಾ ಮೇಲೆ ನಿರ್ಬಂಧ ಹೇರಿದ ಅಮೆರಿಕ: ನಾರ್ಡ್‌ ಸ್ಟ್ರೀಮ್ 2 ಯೋಜನೆ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಪ್ರಾರಂಭಿಸಿದ ಬೆನ್ನಲ್ಲೇ ವಿಶ್ವದ ಹಲವು ರಾಷ್ಟ್ರಗಳು ರಷ್ಯಾ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿವೆ.
ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕ, ರಷ್ಯಾದಿಂದ ಜರ್ಮನಿಗೆ ನೈಸರ್ಗಿಕ ಅನಿಲ ಪೂರೈಸುವ ನಾರ್ಡ್‌ ಸ್ಟ್ರೀಮ್ 2 ಗ್ಯಾಸ್‌ ಪೈಪ್‌ ಪೈನ್‌ ಯೋಜನೆ ರದ್ದುಗೊಳಿಸುವುದಾಗಿ ಅಮೆರಿಕ ಘೋಷಿಸಿದೆ.
ಜರ್ಮನಿ ತನ್ನ ನಾರ್ಡ್‌ ಸ್ಟ್ರೀಮ್‌ 2 ಮತ್ತು ಅದರ ಕಚೇರಿಗಳ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಅಮೆರಿಕ ಈ ಘೋಷಣೆ ಮಾಡಿದೆ.
ಈ ನಾರ್ಡ್‌ ಸ್ಟ್ರೀಮ್ 2 ಪೈಪ್‌ ಲೈನ್‌ ವಿಚಾರವಾಗಿ ಅಮೆರಿಕ ಹಾಗೈ ರಷ್ಯಾ ನಡುವೆ ಕಳೆದ ಹಲವು ವರ್ಷಗಳಿಂದ ಸಂಘರ್ಷ ಉಂಟಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!