ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆದ ಆರೋಪ: ಓರ್ವ ಬಂಧನ

ಹೊಸದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯ ನಾಯನೇಗಲಿ ಗ್ರಾಮ ಸೀಮೆಯಲ್ಲಿ ಯಮನಪ್ಪ ನೀಲಪ್ಪಗಂಗೂರ ಎಂಬುವವನು ತನ್ನ ಜಮೀನಲ್ಲಿ ಬೆಳೆಗಳ ನಡುವೆ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದು ಬೆಳಕಿಗೆ ಬಂದಿದೆ.
ಜಮೀನದಲ್ಲಿ ಜೋಳ, ಮೆನಸಿನಕಾಯಿ ಮತ್ತು ಉಳ್ಳಾಗಡ್ಡಿ ಮಿಶ್ರ ಬೆಳೆಗಳ ಮಧ್ಯದಲ್ಲಿ ತನ್ನ ಲಾಭಕ್ಕಾಗಿ ಅಕ್ರಮವಾಗಿ ಗಾಂಜಾಗಿಡಗಳನ್ನು ಬೆಳೆದಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಆತ ಬೆಳೆದ ಒಟ್ಟು 27 ಗಾಂಜಾಗಿಡಗಳು ಅಂದಾಜು 80,500 ರೂಪಾಯಿ ಮೌಲ್ಯದ್ದಾಗಿದೆ. ಇವುಗಳನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ. ಈ ಸಂಬಂಧ ಬಾಗಲಕೋಟ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆದಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!