ಜೈಲಾಧಿಕಾರಿಗೆ ಹೆದರಿ ಮೊಬೈಲ್​ ಫೋನ್​ ಅನ್ನೇ ನುಂಗಿದ ಕೈದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿಹಾರ್​ ಜೈಲಿನಲ್ಲಿ ಕೈದಿಯೋರ್ವ ಜೈಲಾಧಿಕಾರಿಗೆ ಹೆದರಿ ಮೊಬೈಲ್​ ಫೋನ್​ ನುಂಗಿರುವ ಘಟನೆ ನಡೆದಿದೆ. ಆತನನ್ನು ದೀನ್​ ದಯಾಳ್​ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಿಹಾರ್​ ನಲ್ಲಿ ಜೈಲಾಧಿಕಾರಿಗಳು ಕೈದಿಗಳ ಬಳಿ ಮೊಬೈಲ್​​ ಸಹಿತ ಇತರೆ ನಿಷೇಧಿತ ವಸ್ತುಗಳಿರುವ ಕುರಿತು ತನಿಖೆ ನಡೆಸುತ್ತಿರುವಾಗ ಕೈದಿಯೋರ್ವ ಭಯದಿಂದ ಫೋನ್​ ಅನ್ನೇ ನುಂಗಿದ್ದಾನೆ.
ತಕ್ಷಣವೇ ಆತನನ್ನು ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಬಳಿಕ ಆತನ ಆರೋಗ್ಯ ಮತ್ತಷ್ಟು ಹದಗೆಟ್ಟಿರುವ ಕಾರಣ ದೀನ್​ ದಯಾಳ್​ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿ ಸಮಯ ಕಳೆದರೂ, ಕೈದಿಯ ಹೊಟ್ಟೆಯೊಳಗಿರುವ ಮೊಬೈಲ್ ಫೋನ್​​​ ಇನ್ನು ಹೊರತೆಗೆದಿಲ್ಲ.ಹಾಗಾಗಿ, ಶಸ್ತ್ರಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!