ಹೊಸದಿಗಂತ ಡಿಜಿಟಲ್ ಡೆಸ್ಕ್ :
ಗಾಂಜಾ ಹಾಗೂ ನಿಷೇಧಿತ ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಠಾಣಾ ಪೋಲಿಸರ ತಂಡ ಬಂಧಿಸಿದೆ.
ಹಿರಿಯಡ್ಕದ ನಿವಾಸಿ ರಾಘವೇಂದ್ರ ದೇವಾಡಿಗ (41) ಮತ್ತು ಬಡಗಬೆಟ್ಟು ನಿವಾಸಿ ಜಗದೀಶ್ ಪೂಜಾರಿ (32) ಬಂಧಿತ ಆರೋಪಿಗಳು.
ಉಡುಪಿ ನಗರದ ಟೌನ್ ಹಾಲ್ ಮುಂಭಾಗದ ರಿಕ್ಷಾ ನಿಲ್ದಾಣದ ಬಳಿ ನಿಷೇದಿತ ಮಾದಕ ವಸ್ತುಗಳಾದ ಗಾಂಜಾ ಹಾಗೂ ಡ್ರಗ್ಸ್‌ನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೆನ್ ಅಪರಾಧ ಪೊಲೀಸ್ ಠಾಣೆ ಪೊಲೀಸರು, 1 ಕೆ.ಜಿ 176 ಗ್ರಾಂ ತೂಕದ ಗಾಂಜಾ , 10 ಗ್ರಾಂ ತೂಕದ Methamphetamine Durg, ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್, ಮೊಬೈಲ್ – 2, ವೇಯಿಂಗ್ ಮಿಷನ್-1, ಪೌಡರ್ ಪ್ಯಾಕ್ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್ ಕವರ್-17 ಸೇರಿದಂತೆ ಒಟ್ಟು 2,09,000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.